ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ವಸತಿ ರಹಿತರ ಮುಗಿಯದ ವನವಾಸ: ಸೂರಿಗಾಗಿ ಪರಿತಪಿಸುತ್ತಿರುವ 1600 ಕುಟುಂಬ

Published : 20 ಸೆಪ್ಟೆಂಬರ್ 2024, 5:42 IST
Last Updated : 20 ಸೆಪ್ಟೆಂಬರ್ 2024, 5:42 IST
ಫಾಲೋ ಮಾಡಿ
Comments

ಶಿರಸಿ: ‘ನಗರ ಭಾಗದಲ್ಲಿ ನಿವೇಶನ ಹಾಗೂ ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸುವ ವಸತಿ ಯೋಜನೆಯಡಿ ಸ್ವಂತ ನಿವೇಶನ ನೀಡಿ ಎಂದು ಕೊಟ್ಟ ಅರ್ಜಿಗೆ ಈಗ ಹತ್ತರ ಪ್ರಾಯವಾಗಿದೆ. ಆದರೆ ನಾವು ಆಗ ಹೇಗಿದ್ದೆವೋ ಈಗಲೂ ಅತಿಕ್ರಮಣ ಜಾಗದಲ್ಲೇ ಇದ್ದೇವೆ. ನಗರಾಡಳಿತದಿಂದ ಯಾವುದೇ ಸ್ಪಂದನೆ ಇಲ್ಲ’ ಎನ್ನುತ್ತಾರೆ ಗಣೇಶನಗರದ ವಸತಿ ರಹಿತ ಕೂಲಿ ಕಾರ್ಮಿಕ ಮಂಜುನಾಥ್ ಭೋವಿವಡ್ಡರ್. 

ದಶಕದ ಹಿಂದೆ ವಾಜಪೇಯಿ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ವಾಜಪೇಯಿ ವಸತಿ ಮತ್ತು ಅಂಬೇಡ್ಕ‌ರ್ ವಸತಿ ಯೋಜನೆ ಅಡಿ ತಲಾ ₹ 1.50 ಲಕ್ಷವನ್ನು ಕೇಂದ್ರ ಸರ್ಕಾರ ನೀಡುತ್ತದೆ. ರಾಜ್ಯ ಸರ್ಕಾರ ವಾಜಪೇಯಿ ವಸತಿ ಯೋಜನೆಗೆ ₹ 1.20 ಲಕ್ಷ ಮತ್ತು ಅಂಬೇಡ್ಕರ್‌ ವಸತಿ ಯೋಜನೆ ಫಲಾನುಭವಿಗೆ ₹ 2 ಲಕ್ಷ ಆರ್ಥಿಕ ಸಹಾಯ ಒದಗಿಸುತ್ತದೆ.

‘ಯೋಜನೆಯಡಿ ನಗರದಲ್ಲಿ 4 ಸಾವಿರ ಜನರು ನಿವೇಶನದ ಜತೆ ವಸತಿ ಸೌಲಭ್ಯ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದರು. ಇವುಗಳನ್ನು ಪರಿಶೀಲಿಸಿ 1,600 ಅರ್ಜಿಯನ್ನು ಮಾನ್ಯ ಮಾಡಲಾಗಿದೆ. ಆದರೆ ಸೌಲಭ್ಯ ಮಾತ್ರ ಈವರೆಗೆ ಕಲ್ಪಿಸಿಲ್ಲ. ನಗರ ಪ್ರದೇಶದಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಕಂದಾಯ ಹಾಗೂ ನಗರಸಭೆ ಜಾಗದ ಲಭ್ಯತೆ ಇರದ ಕಾರಣಕ್ಕೆ ನಗರ ವಸತಿ ಯೋಜನೆ ಅನುಷ್ಠಾನ ನನೆಗುದಿಗೆ ಬಿದ್ದಿದೆ. ಇದು ದಶಕದಿಂದ ಸೂರಿಗಾಗಿ ಬೇಡಿಕೆ ಸಲ್ಲಿಸುತ್ತಿರುವವರ ಸಾವಿರಾರು ಬಡವರ ಆಕ್ಷೇಪಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಅವರು. 

‘ಯೋಜನೆ ಜಾರಿಗೊಂಡು ದಶಕವಾದರೂ ಶಿರಸಿ ನಗರ ವ್ಯಾಪ್ತಿಯಲ್ಲಿ ಈವರೆಗೆ 217 ಮಂದಿ ಮಾತ್ರ ಸೂರಿನ ಸೌಲಭ್ಯ ಪಡೆದುಕೊಂಡಿದ್ದಾರೆ. ಉಳಿದವರಿಗೆ 'ಸ್ವಂತ ನಿವೇಶನ' ಇಲ್ಲದ ಕಾರಣ ಸೌಲಭ್ಯ ನೀಡಿಲ್ಲ. ನಗರ ಸಮೀಪದ ಜಾಗ ಗುರುತಿಸಲು ನಗರಾಡಳಿತ ಆಸಕ್ತಿ ತೋರದಿರುವುದರಿಂದ ಬಡ ಅರ್ಜಿದಾರರು ಸರ್ಕಾರದ ಸೌಲಭ್ಯದಿಂದ ವಂಚಿತರಾಗುವಂತಾಗಿದೆ’ ಎಂಬುದು ವಸತಿ ರಹಿತರ ದೂರಾಗಿದೆ. 

‘ವಸತಿ ಯೋಜನೆ ನಿಯಮಾವಳಿ ಪ್ರಕಾರ ಮನೆ ಮಂಜೂರಾತಿಗೆ ಅರ್ಜಿದಾರ ಸ್ವಂತ ಭೂಮಿ ಹೊಂದಿರಬೇಕು. ಆದರೆ ನಗರಸಭೆ ನಡೆಸಿದ ಸಮೀಕ್ಷೆ ವೇಳೆ 1,600 ಜನರು ಸ್ವಂತ ನಿವೇಶನ ಹೊಂದಿಲ್ಲ ಎಂಬುದು ಖಚಿತವಾಗಿದೆ. ಇದರಿಂದಾಗಿ ಮನೆ ಮಂಜೂರು ಮಾಡಲು ಅಡ್ಡಿಯಾಗಿದೆ’ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಕಾಂತರಾಜ್. 

‘ಸಂಪೂರ್ಣ ವಸತಿ ರಹಿತರಿಗೆ ಜಿ ಪ್ಲಸ್ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸಿ ಮನೆ ನಿರ್ಮಿಸಿ ಕೊಡಲು ನಗರ ಪ್ರದೇಶದಲ್ಲಿ ಜಾಗದ ಲಭ್ಯತೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಜಾಗ ಗುರುತಿಸಿದರೂ, ನಗರದಿಂದ ಏಳೆಂಟು ಕಿಮೀ ದೂರ ಎಂಬ ಕಾರಣಕ್ಕೆ ಅರ್ಜಿದಾರರು ಯಾರೂ ಒಪ್ಪುತ್ತಿಲ್ಲ’ ಎಂಬುದು ಅವರ ವಾದ.

ನಗರಕ್ಕೆ ತಾಗಿಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಜಾಗ ಹುಡುಕುವ ಪ್ರಯತ್ನ ಆಗಬೇಕೇ ಹೊರತು ದೂರದ ಹಳ್ಳಿಗಳತ್ತ ಆದ್ಯತೆ ನೀಡಬಾರದು
ಪ್ರದೀಪ ಶೆಟ್ಟಿ, ನಗರಸಭೆ ಸದಸ್ಯ
<p class="quote">ಸರ್ಕಾರದ ವಸತಿ ಯೋಜನೆಯಡಿ ವಸತಿ ಸಂಕೀರ್ಣ ನಿರ್ಮಿಸಲು ಸೂಕ್ತ ಜಾಗ ಹುಡುಕಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ</p> <p class="quote">ಕಾಂತರಾಜ್, <span class="Designate">ಪೌರಾಯುಕ್ತ</span></p>

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT