ಭಟ್ಕಳ: ಪೊಲೀಸ್ ಕಿರುಕುಳಕ್ಕೆ ಬೇಸತ್ತು ಬ್ಯಾಂಕಿನ ನಿವೃತ್ತ ಉದ್ಯೋಗಿಯೊಬ್ಬ ಗುರುವಾರ ತಾಲ್ಲೂಕಿನ ಹಸರವಳ್ಳಿಯ ತೋಟದ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಟ್ಕಳ ಪಟ್ಟಣದ ಮಣ್ಕುಳಿ ನಿವಾಸಿ ಕಲ್ಮರ್ಗಿಮನೆ ಮಾರುತಿ ನಾಗಪ್ಪ ನಾಯ್ಕ(63) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಭಟ್ಕಳ ಶಹರ ಠಾಣೆಯ ಪಿಎಸ್‌ಐ ಸಾರ್ವಜನಿಕವಾಗಿ ಇವರನ್ನು ನಿಂದಿಸಿ, ವಾಹನದ ಚಾಚಿಯನ್ನು ಕಿತ್ತುಕೊಂಡು ಅವಮಾನಿಸಿದ್ದಾರೆ. ಇದರಿಂದ ನೊಂದ ಮಾರುತಿ ನಾಯ್ಕ ತಮ್ಮ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮಣ್ಕುಳಿ ಸುಬ್ರಾಯ ನಾಗಪ್ಪ ನಾಯ್ಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.