ಗೋಕರ್ಣ: ಗಂಗಾವಳಿ ನದಿಯ ಸೇತುವೆಯ ತಡೆಗೋಡೆಯ ಮೇಲೆ ಚಿಕ್ಕಮಗುವನ್ನು ನಿಲ್ಲಿಸಿದ್ದ ಪ್ರವಾಸಿಗರಿಗೆ ಪೊಲೀಸರು ಕ್ಯಾಮೆರಾ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅಂಕೋಲಾದಿಂದ ಗೋಕರ್ಣಕ್ಕೆ ಭಾನುವಾರ ಬರುತ್ತಿದ್ದ ಪ್ರವಾಸಿಗರು ಗಂಗಾವಳಿಯ ಸೇತುವೆಯ ಮೇಲೆ ಕಾರನ್ನು ನಿಲ್ಲಿಸಿ ಸೆಲ್ಫಿ ತೆಗೆಯುವ ಸಮಯದಲ್ಲಿ ಚಿಕ್ಕ ಮಗುವನ್ನು ತಡೆಗೋಡೆಯ ಮೇಲೆ ನಿಲ್ಲಿಸಿದ್ದನ್ನು ಕ್ಯಾಮೆರಾ ಮೂಲಕ ಗಮನಿಸಿದ ಗೋಕರ್ಣ ಪೊಲೀಸರು ಧ್ವನಿವರ್ಧಕದ ಮೂಲಕ, ಸುರಕ್ಷಿತವಾಗಿ ಮಗುವನ್ನು ಹಿಡಿದುಕೊಳ್ಳುವಂತೆ ತಿಳಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹಿತ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.