ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ | ಬರದ ಸ್ಥಿತಿಯಲ್ಲೂ ಕೆರೆ ಅಭಿವೃದ್ಧಿಗೆ ತಾತ್ಸಾರ

ಹೊನ್ನಾವರದಲ್ಲಿವೆ 70ಕ್ಕೂ ಹೆಚ್ಚು ಕೆರೆಗಳು: ನಿರ್ವಹಣೆಗೆ ನಿರ್ಲಕ್ಷ್ಯ– ಆರೋಪ
Published 12 ನವೆಂಬರ್ 2023, 5:33 IST
Last Updated 12 ನವೆಂಬರ್ 2023, 5:33 IST
ಅಕ್ಷರ ಗಾತ್ರ

ಹೊನ್ನಾವರ: ತಾಲ್ಲೂಕಿನಲ್ಲಿ ಹೇಳಿಕೊಳ್ಳುವುದಕ್ಕೆ ನೂರಾರು ಕೆರೆಗಳಿವೆಯಾದರೂ ಅವುಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಇಲಾಖೆಗಳ ನಿರ್ಲಕ್ಷ್ಯ ಧೋರಣೆಯಿಂದ ಕೆರೆಗಳ ನಿರ್ವಹಣೆ ಕುಂಠಿತವಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿರುವ ಆರೋಪ.

ತಾಲ್ಲೂಕಿನ 26 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸೇರಿದ 70 ಕೆರೆಗಳಿವೆ. ಖರ್ವಾ ಗ್ರಾಮದ 10, ಚಿಕ್ಕನಕೋಡ ಗ್ರಾಮದ 9, ಕಡ್ಲೆ ಮತ್ತು ನವಿಲಗೋಣ ಗ್ರಾಮದ ತಲಾ 7 ಹಾಗೂ ಸಾಲಕೋಡ ಗ್ರಾಮದ 6 ಕೆರೆಗಳು ಪಟ್ಟಿಯಲ್ಲಿವೆ. ಕರ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಮತೀರ್ಥದ ಸಮೀಪ 39 ಎಕರೆ ವಿಸ್ತೀರ್ಣವುಳ್ಳ ಅರೆಸಾಮಿ ಕೆರೆ ಇದೆ. ಹೊನ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪುರಾತನ ಶೆಟ್ಟಿಕೆರೆ ಹಾಗೂ ಮಂಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಕೆರೆಗಳಿವೆ.

ಮಂಕಿಯ ಹೆಗ್ಗಾರಹಿತ್ಲ, ಮುಲ್ಲಿಕೇರಿ ಹಾಗೂ ಕೊಪ್ಪದಮಕ್ಕಿಯಲ್ಲಿ ಹೆಚ್ಚು ವಿಸ್ತೀರ್ಣವುಳ್ಳ ಕೆರೆಗಳಿವೆ. ಕಂದಾಯ ಇಲಾಖೆಗೆ ಸೇರಿದ ಕೆರೆಗಳ ಹೊರತಾಗಿ ಖಾಸಗಿ ಹಾಗೂ ಅರಣ್ಯ ಜಾಗದಲ್ಲೂ ಕೆರೆಗಳಿರುವುದನ್ನು ದಾಖಲೆ ತಿಳಿಸುತ್ತದೆ.

ನರೇಗಾ ಅಡಿಯಲ್ಲಿ ಎರಡು ವರ್ಷಗಳ ಹಿಂದೆ ಕಡತೋಕಾದಲ್ಲಿ ಕೆರೆ ಹೂಳೆತ್ತಿದ್ದನ್ನು ಬಿಟ್ಟರೆ ಆ ನಂತರದಲ್ಲಿ ಕೆರೆಗೆ ಸಂಬಂಧಿಸಿದ ಯಾವ ಕಾಮಗಾರಿಯೂ ನಿರ್ದಿಷ್ಟವಾಗಿ ನಡೆದಿಲ್ಲ ಎಂಬುದು ಅಧಿಕಾರಿ ವಲಯಗಳ ಮಾಹಿತಿ.

‘ಹೊನ್ನಾವರ ಪಟ್ಟಣದಲ್ಲಿರುವ ಶೆಟ್ಟಿಕೆರೆ ಅಭಿವೃದ್ಧಿಗೆ ಕಳೆಡೆರಡು ವರ್ಷಗಳಿಂದ ಪ್ರಸ್ತಾವನೆ ಸಲ್ಲಿಸುತ್ತ ಬಂದಿದ್ದೇವೆ. ಆದರೆ ಅಭಿವೃದ್ಧಿಗೆ ಅನುದಾನ ಸಿಕ್ಕಿಲ್ಲ’ ಎಂಬುದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ ಹೇಳುತ್ತಾರೆ.

‘ಕೆರೆ ಅಭಿವೃದ್ಧಿಗೆ ಹೊಸ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಹಳೆಯ ಪ್ರಸ್ತಾವನೆಗಳಿಗೆ ಅನುದಾನ ಸಿಕ್ಕಿಲ್ಲ’ ಎಂದು ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ರಾಘವೇಂದ್ರ ನಾಯ್ಕ ತಿಳಸಿದರು.

‘ಕೆರೆ, ಬಾಂದಾರ, ಬಾವಿಗಳ ಅಭಿವೃದ್ಧಿಗೆ ಮಹತ್ವ ನೀಡಿ ಭೂಮಿಯಲ್ಲಿ ನೀರಿನ ಮಟ್ಟ ಹೆಚ್ಚಿಸುವ ಸುಸ್ಥಿರ ಯೋಜನಾ ಕಾಮಗಾರಿಗಳ ಬದಲಿಗೆ ಕೊಳವೆ ಬಾವಿ ಕೊರೆದು ತಾತ್ಕಾಲಿಕ ನೀರಿನ ಪೂರೈಕೆ ಮಾಡುವ ಯೋಜನೆಗಳಿಗೆ ಹೆಚ್ಚು ಆದ್ಯತೆ ದೊರಕಿದೆ. ಕುಡಿಯುವ ನೀರಿನ ತುರ್ತು ಪೂರೈಕೆ ನೆಪವೊಡ್ಡಿ ಅರಣ್ಯ ಜಾಗ ಸೇರಿದಂತೆ ಎಲ್ಲೆಂದರಲ್ಲಿ ಕೊಳವೆ ಬಾವಿಗಳನ್ನು ನಿರ್ಮಿಸಲಾಗುತ್ತಿದೆ. ಐತಿಹಾಸಿಕ ಅರೆಸಾಮಿ ಕೆರೆ ಅತಿಕ್ರಮಣವಾಗುತ್ತಿದ್ದು ಕೆರೆ ಕಸದ ತೊಟ್ಟಿಯಾಗುತ್ತಿರುವುದನ್ನು ಹಲವು ಬಾರಿ ಸ್ಥಳೀಯ ಕರ್ಕಿ ಗ್ರಾಮ ಪಂಚಾಯ್ತಿ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ. ಬರದ ಪರಿಸ್ಥಿತಿಯಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕೆರೆಯ ಅಭಿವೃದ್ಧಿ ಆದ್ಯತೆಯಾಗಿ ಕಾಣುತ್ತಿಲ್ಲ’ ಎಂದು ವಂದೂರಿನ ಪರಮ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

ಕೆರೆ ದಂಡೆಯಲ್ಲಿ ತ್ಯಾಜ್ಯ ಚೆಲ್ಲಿರುವ ದೃಶ್ಯ.
ಕೆರೆ ದಂಡೆಯಲ್ಲಿ ತ್ಯಾಜ್ಯ ಚೆಲ್ಲಿರುವ ದೃಶ್ಯ.
ಶೌಚಾಲಯ ರಸ್ತೆ ಕಾಂಪೌಂಡ್ ಜಮೀನು ಅಭಿವೃದ್ಧಿ ಮೊದಲಾದ ಕೆಲಸಗಳಿಗೆ ಗ್ರಾಮ ಪಂಚಾಯ್ತಿಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಕೆರೆ ಅಭಿವೃದ್ಧಿಗೆ ಬೇಡಿಕೆ ಇಲ್ಲ
ಕೃಷ್ಣಾನಂದ ನರೇಗಾ ವಿಭಾಗದ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT