ಶಿರಸಿ: ಮನೆಯೊಂದರಲ್ಲಿ ವೇಶ್ಯವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸೋಮವಾರ ದಾಳಿ ನಡೆಸಿದ ಮಾರುಕಟ್ಟೆ ಠಾಣೆಯ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮರಾಠಿಕೊಪ್ಪದ ಸಾವಿತ್ರಿ ಭಟ್ (56), ಅಗಸೇಬಾಗಿಲಿನ ರಾಮಚಂದ್ರ ಗಜಾನನ ನಾಯ್ಕ (59), ಹೊನ್ನಾವರದ ಲಕ್ಷ್ಮೀಕಾಂತ ನಾಯ್ಕ (22), ಹುಬ್ಬಳ್ಳೀಯ ಆನಂದ ರೋಣಿಮಠ (57) ಬಂಧಿತ ಆರೋಪಿಗಳು. ಇವರಿಂದ ₹ 2850 ನಗದು, ನಾಲ್ಕು ಮೊಬೈಲ್ ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾವಿತ್ರಿ ಭಟ್ ಹಾಗೂ ರಾಮಚಂದ್ರ ನಾಯ್ಕ ಹಣ ಗಳಿಸುವ ಉದ್ದೇಶದಿಂದ ಒತ್ತಾಯ ಪೂರ್ವಕವಾಗಿ ಇಬ್ಬರು ಮಹಿಳೆಯರನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ, ಸಿಪಿಐ ಪ್ರದೀಪ ಬಿ.ಯು ಮಾರ್ಗದರ್ಶನದಲ್ಲಿ ಮಾರುಕಟ್ಟೆ ಠಾಣೆಯ ಪಿಎಸ್‌ಐ ನಾಗಪ್ಪ, ಸಿಬ್ಬಂದಿ ಗೀತಾ ಕಲಘಟಗಿ, ಮಹಾಂತೇಶ ಬಾರಿಕೇರ, ಸುರೇಶ ಗೊಂಜಾಲಿ, ರಾಮಯ್ಯ ಪೂಜಾರಿ, ವೆಂಕಟೇಶ ನಯಕ, ದೇವರಾಜ ನಾಯಕ, ಪ್ರದೀಪ ಕೈಟಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.