ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಎಸ್‍ಡಿಸಿ ಪರೀಕ್ಷೆ: ಶೇ.55 ಅಭ್ಯರ್ಥಿಗಳು ಗೈರು

Published 29 ಅಕ್ಟೋಬರ್ 2023, 13:45 IST
Last Updated 29 ಅಕ್ಟೋಬರ್ 2023, 13:45 IST
ಅಕ್ಷರ ಗಾತ್ರ

ಕಾರವಾರ: ವಿವಿಧ ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಭರ್ತಿಗೆ ಭಾನುವಾರ ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ಪರೀಕ್ಷೆ ಜರುಗಿತು. ಆದರೆ, ನೋಂದಾಯಿಸಿಕೊಂಡಿದ್ದವರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಅಭ್ಯರ್ಥಿಗಳು ಗೈರಾಗಿದ್ದರು.

ಕಾರವಾರ, ಶಿರಸಿ, ಕುಮಟಾ, ದಾಂಡೇಲಿ, ಅಂಕೋಲಾ, ಹೊನ್ನಾವರ, ಭಟ್ಕಳ, ಹಳಿಯಾಳದ ಕೇಂದ್ರಗಳಲ್ಲಿ ಪರೀಕ್ಷೆ ನಡೆದವು. 6,954 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 3,092 ಮಂದಿ ಮಾತ್ರ ಪರೀಕ್ಷೆ ಬರೆದಿದ್ದರು. 3,882 ಮಂದಿ ಗೈರಾಗಿದ್ದರು. ಹೊರ ಜಿಲ್ಲೆಗಳಿಂದಲೂ ನೂರಾರು ಅಭ್ಯರ್ಥಿಗಳು ಪರೀಕ್ಷೆ ಸಲುವಾಗಿ ಶನಿವಾರವೇ ವಿವಿಧ ನಗರಗಳಲ್ಲಿ ಬಂದು ತಂಗಿದ್ದರು.

‘ಏಕಕಾಲಕ್ಕೆ ಬೇರೆ ಬೇರೆ ನಿಗಮ, ಮಂಡಳಿಗಳಿಗೆ ಪರೀಕ್ಷೆ ನಡೆಯಿತು. ಕೆಲವರು ಶನಿವಾರ ಎಫ್.ಡಿ.ಎ ಪರೀಕ್ಷೆ ಸಲುವಾಗಿ ದೂರದ ಜಿಲ್ಲೆಗಳ ಕೇಂದ್ರಕ್ಕೆ ತೆರಳಿದ್ದರು. ಹೀಗಾಗಿ ಭಾನುವಾರದ ಪರೀಕ್ಷೆಗೆ ಹಾಜರಾಗಿರಲಿಲ್ಲ. ಇದರಿಂದ ಗೈರಾದವರ ಸಂಖ್ಯೆ ಹೆಚ್ಚಳವಾಗಿದೆ’ ಎಂದು ನೋಡಲ್ ಅಧಿಕಾರಿಯೊಬ್ಬರು ತಿಳಿಸಿದರು.

ದಾಂಡೇಲಿಯ ಬಂಗೂರುನಗರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಗಳು ಸ್ಥಳಾಂಕ ಹುಡುಕುವುದರಲ್ಲಿ ನಿರತರಾಗಿದ್ದರು
ದಾಂಡೇಲಿಯ ಬಂಗೂರುನಗರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಗಳು ಸ್ಥಳಾಂಕ ಹುಡುಕುವುದರಲ್ಲಿ ನಿರತರಾಗಿದ್ದರು

ಸುಸೂತ್ರವಾಗಿ ನಡೆದ ಎಫ್‌ಡಿಎ ಪರೀಕ್ಷೆ

ದಾಂಡೇಲಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯು ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಸುಸೂತ್ರವಾಗಿ ನಡೆಯಿತು.

ಅಂಬೇವಾಡಿಯ ಸರ್ಕಾರಿ ಕಾಲೇಜಿನ ಕೇಂದ್ರದಲ್ಲಿ 149 ಬಂಗೂರನಗರದ ಪದವಿ ಪೂರ್ವ ಕಾಲೇಜಿನಲ್ಲಿ224 ಕನ್ಯಾ ಮಹಾ ವಿದ್ಯಾಲಯದಲ್ಲಿ 66 ಹಾಗೂ ಜನತಾ ವಿದ್ಯಾಲಯದಲ್ಲಿ 62 ಸ್ಪರ್ಧಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ನಾಲ್ಕು ಕೇಂದ್ರದಲ್ಲಿ 946 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು 501 ಸ್ಪರ್ಧಾರ್ಥಿಗಳು ಪರೀಕ್ಷೆ ಬರೆದರು.

ಪರೀಕ್ಷಾ ವ್ಯವಸ್ಥಾಪಕರಾಗಿದ್ದ ಎಂ .ಡಿ. ಒಕ್ಕಂದ ಎಂ.ಎಸ್.ಇಟಗಿ ಆಶಾ ಲತಾ ಜೈನ್ ಎನ್.ವಿ.ಪಾಟೀಲ ಶ್ರೀಮಂತ ಮದರೆ ಹನುಮಂತ ಕುಂಬಾರ ಅವರ ನೇತೃತ್ವದಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಮೊದಲ ಬಾರಿಗೆ ತಾಲ್ಲೂಕು ಕೇಂದ್ರದಲ್ಲಿ ಎಸ್.ಡಿ.ಎ ಮತ್ತು ಎಫ್.ಡಿ.ಎ ಸೇರಿದಂತೆ ತಾಂತ್ರಿಕ ಹುದ್ದೆಗಳ ಪರೀಕ್ಷೆ ನಡೆದಿದ್ದು ಪರೀಕ್ಷೆಗೆ ರಾಯಚೂರು ಶಿಗ್ಗಾವಿ ಯಾದಗಿರಿ ಕಿತ್ತೂರು ಬೆಳಗಾವಿ ಭಾಗಗಳಿಂದ ಸ್ಪರ್ಧಾರ್ರಥಿಗಳು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT