ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ | ಹಿರಿಯ‌ ಬೌದ್ಧ ಧರ್ಮಗುರು ಡೊಬೂಮ್‌ ನಿಧನ

Published 4 ಫೆಬ್ರುವರಿ 2024, 15:33 IST
Last Updated 4 ಫೆಬ್ರುವರಿ 2024, 15:33 IST
ಅಕ್ಷರ ಗಾತ್ರ

ಮುಂಡಗೋಡ: ಹಿರಿಯ‌ ಬೌದ್ಧ ಧರ್ಮಗುರು ಎಲ್.ಟಿ. ಡೊಬೂಮ್ ತಲ್ಕು (82) ಆರು ದಿನಗಳ ಹಿಂದೆ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಭಾನುವಾರ ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.2ರ ಲೋಸಲಿಂಗ್ ಬೌದ್ಧ ಮಂದಿರದ ಆವರಣದಲ್ಲಿ ನಡೆಯಿತು.

ಚೀನಾ ಆಕ್ರಮಣದಿಂದ ಟಿಬೆಟ್‌ ತೊರೆದು ಭಾರತಕ್ಕೆ ತಮ್ಮ 17ನೇ ವಯಸ್ಸಿನಲ್ಲಿಯೇ ಅವರು ಬಂದಿದ್ದರು. 1972ರಲ್ಲಿ ಬೌದ್ಧ ತತ್ವಶಾಸ್ತ್ರದಲ್ಲಿ ಗೆಶೆ ಆಚಾರ್ಯ ಪದವಿ ಪಡೆದುಕೊಂಡಿದ್ದರು. ದೆಹಲಿಯ ಟಿಬೆಟ್ ಹೌಸ್‌ ನಿರ್ದೇಶಕರಾಗಿ 30 ವರ್ಷಗಳಿಂದ ಕೆಲಸ ಮಾಡಿದ್ದರು. ಬೌದ್ಧ ಧರ್ಮೀಯರೆ ಪರಮೋಚ್ಛ ನಾಯಕ ದಲೈಲಾಮಾ ಅವರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಬೌದ್ಧಧರ್ಮದ ಕುರಿತು ಬೋಧನೆ ಮಾಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT