ಯಾವುದೇ ತಪ್ಪು ಮಾಡಿದ್ದರೂ ಮಜ್ಜಿಗೆ ಸ್ನಾನದ ಮೂಲಕ ಎಲ್ಲವೂ ಕಳೆಯಲಿ ಎನ್ನುವುದು ಶಿಲ್ಲೆಂಗಾನ್ ಆಚರಣೆಯ ನಂಬಿಕೆ
ಸಂತೋಷ ವರಕ್ ದನಗರ ಗೌಳಿ ಯುವಸೇನೆ ರಾಜ್ಯ ಘಟಕದ ಅಧ್ಯಕ್ಷ
ಆಕರ್ಷಣೀಯ ಗಜಕುಣಿತ
ದನಗರ ಗೌಳಿ ಸಮುದಾಯದವರ ಗಜಕುಣಿತ ನೋಡಲು ಆಕರ್ಷಕವಾಗಿರುತ್ತದೆ. ದಸರಾ ಆರಂಭದ ದಿನದಂದು ಘಟಸ್ಥಾಪನೆ ಮಾಡಿದ ನಂತರ ಗೌಳಿವಾಡಾದ ಎಡಗೆ ಮನೆತನದವರ ಮನೆಯಲ್ಲಿ ಗಜಕುಣಿತ ಸದಸ್ಯರು ಪಾಲ್ಗೊಂಡು ನಿತ್ಯವೂ ಗಜಕುಣಿತ ಮಾಡುತ್ತಾರೆ. ಜಗಾ ಎಂದು ಕರೆಯುವ ವಿಶಿಷ್ಟ ಧಿರಿಸು ಧರಿಸಿಕೊಂಡು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಗಜಕುಣಿತದ ವಿಶೇಷ.