ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ರೋಟರಿ ಕ್ಲಬ್‌ನಿಂದ ಉಚಿತ ಕಂಪ್ಯೂಟರ್ ವಿತರಣೆ

Published 23 ಡಿಸೆಂಬರ್ 2023, 14:05 IST
Last Updated 23 ಡಿಸೆಂಬರ್ 2023, 14:05 IST
ಅಕ್ಷರ ಗಾತ್ರ

ಶಿರಸಿ: ರೋಟರಿ ಕ್ಲಬ್ ಶಿರಸಿ ಘಟಕದ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 12 ಕಂಪ್ಯೂಟರ್‌ಗಳನ್ನು ಈಚೆಗೆ ಹಸ್ತಾಂತರ ಮಾಡಲಾಯಿತು.

ಈ ವೇಳೆ ರೋಟರಿ ಶಿರಸಿ ಘಟಕದ ಅಧ್ಯಕ್ಷ ಶ್ರೀಧರ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಕಂಪ್ಯೂಟರ್‌ಗಳ ಪ್ರಯೋಜನ ಪಡೆದು ಹೆಚ್ಚಿನ ಶ್ರೇಯಸ್ಸು ಪಡೆಯಬೇಕು ಎಂದರು. 

ವೇದಿಕೆಯಲ್ಲಿ ರೋಟರಿಯ ಅಸಿಸ್ಟಂಟ್ ಗವರ್ನರ್ ಆರ್.ಎ.ಖಾಜಿ, ಕಾಲೇಜಿನ ಪ್ರಾಚಾರ್ಯೆ ದಾಕ್ಷಾಯಿಣಿ ಹೆಗಡೆ ಉಪಸ್ಥಿತರಿದ್ದರು.

ಕ್ಲಬ್ ಕಾರ್ಯದರ್ಶಿ ಗಣಪತಿ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ವಿಭಾಗದ ಮುಖ್ಯಸ್ಥ ಮಂಜುನಾಥ ಸ್ವಾಗತಿಸಿದರು. ಐ.ಕ್ಯು.ಎಸ್.ಸಿ. ಸಂಯೋಜಕ ಲೋಕೇಶ ವಂದಿಸಿದರು. ಅಶ್ವಿನಿ ಮತ್ತು ತೃಪ್ತಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT