‘ಚಳಿಗಾಲ ಅಧಿವೇಶನ ಬಂದ ಕಾರಣ ಮುಖ್ಯಮಂತ್ರಿ ಕುರ್ಚಿ ಕದನ ತಾತ್ಕಾಲಿಕ ವಿರಾಮ ಸ್ಥಿತಿ ತಲುಪಿದೆ. ಅಧಿವೇಶನದ ಬಳಿಕ ಇದು ಜೋರಾಗಲಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಶಿರಸಿಯಲ್ಲಿ ಹೇಳಿದರು.
‘ಅನುದಾನ ಬೇಕಾದರೆ ಒಳ್ಳೆಯ ನಾಟಿ ಕೋಳಿ ಅಡುಗೆ ಮಾಡುವುದಾಗಿ ಹೇಳಿ, ಸಿಎಂ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನ ಬಿಟ್ಟು ಬೇಕಾದರೂ ಬರುತ್ತಾರೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದರು.