ಬಹುತೇಕ ಕಡೆಗಳಲ್ಲಿ ಕುಡಿಯುವ ನೀರು ಪೈಪ್‌ಗಳು ಒಡೆದು ಜೀವಜಲ ವ್ಯರ್ಥವಾಗಿ ರಸ್ತೆಗಳಿಗೆ ಹರಿಯುತ್ತಿದ್ದರೂ ನಗರಸಭೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಗಮನಹರಿಸುತ್ತಿಲ್ಲ. ಕೂಡಲೇ ನೀರಿನ ಸೋರಿಕೆ ತಡೆಯಬೇಕು
ರಘುರಾಮ್, ನಗರದ ನಿವಾಸಿ
ದೂರು ಬಂದ ಕಡೆ ತಕ್ಷಣ ನಗರಸಭೆ ಸಿಬ್ಬಂದಿ ಕಳುಹಿಸಿ ದುರಸ್ತಿ ಕಾರ್ಯ ಮಾಡಿಸಲಾಗುತ್ತಿದೆ. ಕಾಮಗಾರಿ ವೇಳೆ ಹಾಳಾದ ಪೈಪ್‍ಲೈನ್ ದುರಸ್ತಿ ಜವಾಬ್ದಾರಿ ಆಯಾ ಕಾಮಗಾರಿ ಗುತ್ತಿಗೆದಾರರದ್ದು ಎಂಬುದನ್ನೂ ತಿಳಿಸಲಾಗಿದೆ.