ಶಿರಸಿ: ಒಂದೇ ಸೂರಿನಡಿ ಎಲ್ಲ ಸರ್ಕಾರಿ ಇಲಾಖೆ ತರುವ ಉದ್ದೇಶದಿಂದ ಜಾರಿಗೊಂಡ ‘ಸರ್ಕಾರಿ ಕಚೇರಿಗಳ ಸಂಕೀರ್ಣ’ ಕಾಮಗಾರಿ ವಿವಿಧ ತೊಡಕುಗಳ ಕಾರಣಕ್ಕೆ ವರ್ಷಾಂತ್ಯದವರೆಗೂ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಬಾಡಿಗೆ ಕಟ್ಟಡದಲ್ಲಿರುವ ಸರ್ಕಾರಿ ಕಚೇರಿಗಳು ಸ್ವಂತ ಕಚೇರಿಗೆ ಸ್ಥಳಾಂತರಗೊಳ್ಳಲು ಇನ್ನೂ ಆರೆಂಟು ತಿಂಗಳು ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಚೇರಿ ಕಲ್ಪಿಸುವ ಉದ್ದೇಶದಿಂದ 2021ರಲ್ಲಿ ₹10 ಕೋಟಿ ವೆಚ್ಚದಲ್ಲಿ ನೂತನ ಆಡಳಿತ ಸೌಧ ಸಂಕೀರ್ಣ ನಿರ್ಮಾಣಕ್ಕೆ ಮಂಜೂರಾತಿ ದೊರೆತಿತ್ತು. ಇಲ್ಲಿನ ಹಳೇ ತಹಶೀಲ್ದಾರ್ ಕಚೇರಿಯ ವಿಸ್ತಾರವಾದ ಆವರಣದಲ್ಲಿ ಕಟ್ಟಡ ಕಾಮಗಾರಿ ನಡೆದಿದ್ದು, ಇನ್ನೂ ಶೇ 25ರಷ್ಟು ಕಾಮಗಾರಿ ನಡೆಯುವುದು ಬಾಕಿಯಿದೆ.

‘ಉದ್ದೇಶಿತ ಸಂಕೀರ್ಣ ನಿರ್ಮಾಣ ಸ್ಥಳದಲ್ಲಿದ್ದ ಕಟ್ಟಡಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ, ಚಿಕ್ಕ ನೀರಾವರಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ, ಕಾರ್ಮಿಕ ಇಲಾಖೆ ಹಾಗೂ ತೂಕ ಮತ್ತು ಗುಣ ಪ್ರಮಾಣ ಇಲಾಖೆ ಕಚೇರಿಗಳನ್ನು ತ್ವರಿತವಾಗಿ ಸ್ಥಳಾಂತರಿಸಿ ಕಟ್ಟಡ ತೆರವು ಮಾಡಲಾಗಿತ್ತು. ಉಳಿದಂತೆ ಉಪ ಬಂಧಿಖಾನೆ, ಖಜಾನೆ ಕಚೇರಿಗಳಿಗೆ ಬೇರೆಡೆ ಜಾಲದ ಲಭ್ಯತೆ ಇಲ್ಲದ ಕಾರಣ ಹಳೆಯ ಕಟ್ಟಡದಲ್ಲಿಯೇ ಕಾರ್ಯಾಚರಣೆ ನಡೆಸುತ್ತಿದ್ದವು. ಅವುಗಳ ಸ್ಥಳಾಂತರವಾಗುವವರೆಗೆ ವರ್ಷ ಕಳೆದಿತ್ತು. ಹೀಗಾಗಿ ಹೊಸ ಕಟ್ಟಡ ನಿರ್ಮಾಣ ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂಬುದು ಗುತ್ತಿಗೆದಾರರ ಮಾತಾಗಿದೆ.

‘ಕಟ್ಟಡ ಕಾಮಗಾರಿ ನಿಗದಿತ ವೇಳೆ ಮುಗಿಯದ ಕಾರಣ ಹತ್ತಕ್ಕೂ ಹೆಚ್ಚು ಇಲಾಖೆ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿಯೇ ಮುಂದುವರಿಯುತ್ತಿವೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ನೀಡಲಾಗುತ್ತಿದೆ. ಕಟ್ಟಡ ಬೇಗ ಮುಗಿದರೆ ಬಾಡಿಗೆ ಮೊತ್ತ ಪೋಲಾಗುವುದು ತಪ್ಪುತ್ತದೆ’ ಎಂಬುದು ಇಲಾಖೆ ಅಧಿಕಾರಿಯೊಬ್ಬರ ಹೇಳಿಕೆ.

‘ಈಗಾಗಲೇ ಕಟ್ಟಡ ಕೆಲಸ ಮುಗಿಯುತ್ತ ಬಂದಿದೆ. ವಿದ್ಯುತ್ ಅಳವಡಿಕೆ, ಅಂತಿಮ ಸ್ಪರ್ಷದ ಕೆಲಸಗಳು ಬಾಕಿಯಿವೆ. ಒಳಾಂಗಣ ಕಾಮಗಾರಿಯಾಗಿರುವ ಕಾರಣ ಮಳೆ ಸುರಿದರೂ ಯಾವುದೇ ಸಮಸ್ಯೆಯಿಲ್ಲ. ಖುರ್ಚಿ, ಮೇಜು ಸೇರಿದಂತೆ ಕಚೇರಿ ಸಲಕರಣೆಗಳನ್ನು ಅಳವಡಿಸುವುದು ಬಾಕಿಯಿದೆ. ಈಗಾಗಲೇ ₹6 ಕೋಟಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯ ನಂತರ ಉಳಿದ ಕಾಮಗಾರಿಗಳು ನಡೆಯಲಿವೆ’ ಎಂಬುದು ಪಿ.ಡಬ್ಲ್ಯು.ಡಿ. ಅಧಿಕಾರಿಗಳ ಮಾಹಿತಿ.

ಕಾಮಗಾರಿ 2025ರ ಮಾರ್ಚ್ಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಆರಂಭದಲ್ಲಿ ಹಲವು ತೊಡಕು ಎದುರಾದ ಕಾರಣ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ
ಭಾನುಪ್ರಕಾಶ ಪಿ.ಡಬ್ಲ್ಯು.ಡಿ. ಇಇ

ಬಾಡಿಗೆ ಕಟ್ಟಡವೇ ಗತಿ

ಕಾಮಗಾರಿ ಮಂಜೂರಾತಿ ಈಗಾಗಲೇ ಮೂರ್ನಾಲ್ಕು ವರ್ಷಗಳು ಕಳೆದಿವೆ. ಇಂದಿಗೂ ಕಾಮಗಾರಿ ನಡೆಯುತ್ತಲೇ ಇದೆ. ಪಿ.ಡಬ್ಲ್ಯು.ಡಿ ಅಧಿಕಾರಿಗಳನ್ನು ಕೇಳಿದರೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳುತ್ತ ವರ್ಷ ಕಳೆದಿದ್ದಾರೆ. ಕಾಮಗಾರಿಯ ವೇಗ ನೋಡಿದರೆ ಇನ್ನೂ ಹಲವು ತಿಂಗಳುಗಳು ಬೇಕಾಗಬಹುದು. ಆವರೆಗೆ ಸರ್ಕಾರಿ ಇಲಾಖೆಗಳಿಗೆ ಬಾಡಿಗೆ ಕಟ್ಟಡವೇ ಗತಿ ಎನ್ನುವಂತಾಗಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.