ಶಿರಸಿ: ‘ಬನವಾಸಿ ಗ್ರಿಡ್ಗೆ ಜಡೆಯಿಂದ ವಿದ್ಯುತ್ ಸಂಪರ್ಕ ಪಡೆಯಲು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದ ರೈತರಿಗೆ ಹಿನ್ನಡೆಯಾಗಿದ್ದು, ವಿದ್ಯುತ್ ಕಂಬಗಳ ನಿಲ್ಲಿಸುವ ಕಾಮಗಾರಿಯನ್ನು ಪೊಲೀಸ್ ಭದ್ರತೆಯಲ್ಲಿ ಶೀಘ್ರದಲ್ಲೇ ಮಾಡಲಾಗುವುದು’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ತಾಲ್ಲೂಕಿನ ಬಿಸಲಕೊಪ್ಪದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಶಿವಮೊಗ್ಗ ಜಿಲ್ಲೆಯಲ್ಲಿ 10 ವಿದ್ಯುತ್ ಕಂಬಗಳು ಮತ್ತು ಜಿಲ್ಲೆಯ ಬನವಾಸಿ ಭಾಗದಲ್ಲಿ ಮೂರು ವಿದ್ಯುತ್ ಕಂಬಗಳು ನಿರ್ಮಾಣವಾಗಬೇಕಿದೆ. ಕಂಬ ನಿರ್ಮಾಣವನ್ನು ವಿರೋಧಿಸಿ ರೈತರು ಕೋರ್ಟ್ ಮೊರೆ ಹೋಗಿದ್ದರು. ಆದರೆ, ಈ ರೈತರಿಗೆ ಹಿನ್ನಡೆಯಾಗಿದೆ. ಸಚಿವ ಮಧು ಬಂಗಾರಪ್ಪ ಸಹ ರೈತರೊಂದಿಗೆ ಮಾತನಾಡಿದ್ದು, ಎರಡು ಪಟ್ಟು ಪರಿಹಾರ ಒದಗಿಸಲು ನಿರ್ಧರಿಸಲಾಗಿದೆ. ಆದರೂ ಕೆಲ ರೈತರು ವಿರೋಧ ಮುಂದುವರಿಸಿರುವ ಕಾರಣ ಪೊಲೀಸ್ ಬಂದೋಬಸ್ತ್ನಲ್ಲಿ ಒಂದೆರಡು ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತಿದೆ. ಇದೀಗ ಬಹುತೇಕ ಸಮಸ್ಯೆಗಳು ಮುಕ್ತಾಯವಾಗಿದ್ದು ಪುನಃ ಕೆಲಸ ಆರಂಭವಾಗಲಿದೆ’ ಎಂದರು.

‘ಬನವಾಸಿಯಲ್ಲಿ ಗ್ರಿಡ್ ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಸಮಸ್ಯೆಗಳು ತೀವ್ರವಾಗಿವೆ. ಈಗಿನ ಸ್ಥಿತಿಯಲ್ಲಿ ಬನವಾಸಿ, ಭಾಶಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಿಕ್ಸರ್ ಸಹ ಬಳಸಲು ಸಾಧ್ಯವಾಗದಷ್ಟು ವಿದ್ಯುತ್ ಕಡಿಮೆ ವೋಲ್ಟೇಜ್ ಇದೆ. ಇದರಿಂದಾಗಿ ಇಲ್ಲಿಯ ಕೆರೆ ತುಂಬವ ಯೋಜನೆಗೆ ಹಿನ್ನಡೆ ಉಂಟಾಗಿದೆ. ರೈತರ ಕೃಷಿ ಪಂಪ್ಸೆಟ್ಗಳಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬನವಾಸಿ ಗ್ರಿಡ್ಗೆ ವಿದ್ಯುತ್ ಸಂಪರ್ಕ ತುರ್ತಾಗಿ ಆಗಬೇಕಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿಯೂ ನಿರಂತರ ಸಂಪರ್ಕದಲ್ಲಿದ್ದಾರೆ. ಒಟ್ಟಾರೆಯಾಗಿ ವಿದ್ಯುತ್ ಗ್ರೀಡ್ ಅತೀ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದರು.

ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಬರಬೇಕಾದ ಹವಾಮಾನ ಆಧಾರಿತ ಬೆಳೆ ವಿಮೆ ಇದುವರೆಗೂ ರೈತರ ಖಾತೆಗೆ ಜಮಾ ಆಗಿಲ್ಲ. ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ವಿಷಯ ತಿಳಿಸಲಾಗಿದೆ. ವಿಧಾನಸಭಾ ಅಧಿವೇಶನದಲ್ಲೂ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡುತ್ತೇನೆ. ವಿಮೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಮಾನ ಜವಾಬ್ದಾರಿಗಳಿವೆ. ಈಗಾಗಲೇ ರಾಜ್ಯ ಕೃಷಿ ಅಧಿಕಾರಿಗಳು ಕೇಂದ್ರ ಕೃಷಿ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ರೈತರಿಗೆ ವಿಮಾ ಕಂಪನಿ ಅನ್ಯಾಯ ಮಾಡಬಾರದು. ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ವಿಮಾ ಹಣವನ್ನು ಜಮಾ ಮಾಡದಿದ್ದರೆ ಎಜೆನ್ಸಿಯನ್ನು ಬ್ಲಾಕ್ ಲೀಸ್ಟ್ ಗೆ ಹಾಕುವುದಾಗಿಯೂ ತಿಳಿಸಲಾಗಿದೆ ಎಂದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಿರಣಾ ಭಟ್, ಪ್ರಮುಖರಾದ ಶ್ರೀಧರ ಗೌಡ, ಎಸ್.ಜಿ.ಭಟ್, ಬಿ.ಎಸ್.ಗಂಗಾಧರ, ನಾಗರಾಜ ನಾಯ್ಕ ಇದ್ದರು.

ಪ್ರತಿ ವರ್ಷದಂತೆ ಈ ವರ್ಷವೂ ಬನವಾಸಿಯಲ್ಲಿ ಕದಂಬೊತ್ಸವ ಆಚರಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಹೆಚ್ಚಿನ ಆಸಕ್ತಿವಹಿಸಿ ಕದಂಬೋತ್ಸವ ಆಚರಣೆ ದಿನಾಂಕ ಪ್ರಕಟಿಸಬೇಕು
ಶಿವರಾಮ ಹೆಬ್ಬಾರ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.