ನಗರ ಪೊಲೀಸ್ ಠಾಣೆಯ ಪಿಎಸ್ಐ ನಾಗಪ್ಪ ಬಿ. ಮಾತನಾಡಿ, ‘ಮಕ್ಕಳಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಇರುವ ಭಯವನ್ನು ಹೊಗಲಾಡಿಸಿ ಭರವಸೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು. ಡಿಎಸ್‌ಪಿ ಗಣೇಶ ಕೆ.ಎಲ್., ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಎಎಸ್ಐ ಹೊನ್ನಪ್ಪ ಅಗೇರ, ಸಿಬ್ಬಂದಿ ಮಂಗಳಮೂರ್ತಿ, ಅರುಣ ಲಮಾಣಿ, ಪ್ರವೀಣ್, ದೀಪಾ ಹರಿಜನ, ಮಂಜುನಾಥ ಕಾಶಿಕೊವಿ ಕಾರ್ಯ ನಿರ್ವಹಿಸಿದರು.