ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಂಕಾರ ತಗ್ಗಿದರೆ ನೆಮ್ಮದಿ ಹೆಚ್ಚು: ಸ್ವರ್ಣವಲ್ಲೀ‌ ಶ್ರೀ

Published 3 ಆಗಸ್ಟ್ 2023, 13:11 IST
Last Updated 3 ಆಗಸ್ಟ್ 2023, 13:11 IST
ಅಕ್ಷರ ಗಾತ್ರ

ಶಿರಸಿ: ‘ಎಲ್ಲರೂ ನಿರಹಂಕಾರ ಭಾವದ ಜೊತೆ ವಿನಯ ಬೆಳಸಿಕೊಳ್ಳಬೇಕು. ಆಗ ಮೋಕ್ಷ ಸಾಧ್ಯ’ ಎಂದು‌ ಸ್ವರ್ಣವಲ್ಲೀ‌ ಗಂಗಾಧರೇಂದ್ರ ಸರಸ್ವತೀ ‌ಸ್ವಾಮೀಜಿ ನುಡಿದರು.

ಚಾತುರ್ಮಾಸ್ಯ ವ್ರತಾಚರಣೆಯ ಹಿನ್ನೆಲೆಯಲ್ಲಿ ತೋರಣಸಿ ಭಾಗದ ಭಕ್ತರು ಗುರುವಾರ ಸಲ್ಲಿಸಿದ‌ ಗುರು ಸೇವೆ ಸ್ವೀಕರಿಸಿ‌ ಅವರು ಆಶೀರ್ವಚನ‌ ನೀಡಿದರು.

‘ಭಕ್ತಿ ಸಾಧನೆ ಆಗುವುದೇ ಅಹಂಕಾರ ಕಡಿಮೆ ಆದಾಗ.‌ ಸಾಧನೆ ಮಾರ್ಗದಲ್ಲಿ ‌ನಿರಹಂಕಾರ ಭಾವ ಇರಬೇಕು’ ಎಂದರು.

‘ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ ಸಹಕಾರ ನೀಡಬೇಕು. ಎಲ್ಲರ ಹಿತ‌ ಕಾಯುತ್ತ ಧರ್ಮ ಸಂರಕ್ಷಣೆ ಆಗಬೇಕು. ಆ ಭಾವದಲ್ಲಿ ಸರ್ಕಾರ, ಸಮಾಜ ಎಲ್ಲವೂ ಕೆಲಸ ಮಾಡಬೇಕು’ ಎಂದು ವಿವರಿಸಿದ ಸ್ವಾಮೀಜಿ, ‘ಅಹಂಕಾರ ಕಡಿಮೆ ಆದಷ್ಟು‌ ನೆಮ್ಮದಿ. ಅಹಂಕಾರ ಹೆಚ್ಚಾದರೆ ಅನಾರೋಗ್ಯದ ಜೊತೆ ಕೌಟುಂಬಿಕ‌ ಸಮಸ್ಯೆ, ಕಲಹಗಳೂ ಉಂಟಾಗುತ್ತದೆ. ಸಾಮಾಜಿಕ‌ ಸಮಸ್ಯೆಗಳೂ ಹೆಚ್ಚಾಗುತ್ತದೆ. ತೀವ್ರತೆ, ಘರ್ಷಣೆ ಆಗುತ್ತದೆ. ಆರೋಗ್ಯ, ಸಾಮರಸ್ಯ, ಮುಖ್ಯವಾಗಿ‌ ಧರ್ಮ ಸಂರಕ್ಷಣೆಗೆ‌‌ ನಿರಹಂಕಾರ‌ ಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ‌ ನೀಡಿದರು.

ಗುರುಪಾದ ಹೆಗಡೆ ಹಲಸಿನಳ್ಳಿ, ಗಿರೀಶ ಭಟ್ ಕರಸುಳ್ಳಿ, ಆರ್.ಎಸ್.ಹೆಗಡೆ ಭೈರುಂಬೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT