ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಈ ಕುರಿತು ಬುಧವಾರ ಪ್ರಕಟಣೆ ನೀಡಿದ್ದು, ಸದಸ್ಯರು ಪ್ರಾಮಾಣಿಕವಾಗಿ ಹಾಗೂ ಭಾವನಾತ್ಮಕವಾಗಿ ವ್ಯವಹರಿಸಿರುವುದರ ಪರಿಣಾಮವಾಗಿ ಸಂಘವು ಆರ್ಥಿಕವಾಗಿ ಸದೃಢಗೊಂಡು ರೈತರ ಆಶೋತ್ತರಗಳನ್ನು ಈಡೇರಿಸುವಂತಾಗಿದೆ. ಬದಲಾದ ಕಾಲ ವ್ಯವಹಾರಗಳಿಗೆ ಅನುಗುಣವಾಗಿ ಸಂಘವು ತನ್ನ ವ್ಯವಹಾರಗಳನ್ನು ಆಧುನಿಕರಣಗೊಳಿಸಿ ಸದಸ್ಯರಿಗೆ ಗರಿಷ್ಠ ಸೇವೆ ನೀಡುವಲ್ಲಿ ಕಾರ್ಯಪ್ರವೃತ್ತವಾಗಿದೆ. ಸರ್ಕಾರದಿಂದ ರೈತರಿಗೆ ಸಿಗುವ ಬಡ್ಡಿ ರಿಯಾಯಿತಿ ಸಾಲಗಳನ್ನು ಸಕಾಲಿಕವಾಗಿ ಒದಗಿಸುತ್ತ ಬಂದಿದ್ದು, ₹ 35 ಕೋಟಿಗೂ ಮೀರಿ ಕೃಷಿಕರಿಗೆ ಶೂನ್ಯ ಬಡ್ಡಿದರ ಅನ್ವಯವಾಗುವಂತೆ ಬೆಳೆಸಾಲ ನೀಡಿ ರಾಜ್ಯದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಾಲ ನೀಡುವ ಸಹಕಾರ ಸಂಘಗಳ ಅಗ್ರಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.