ಹಳಿಯಾಳ | ಆರಂಭಗೊಳ್ಳದ ಕಬ್ಬು ಕಟಾವು: ಕೆಲಸವಿಲ್ಲದೆ ಅತಂತ್ರವಾದ ಕಾರ್ಮಿಕರು
ಸಂತೋಷಕುಮಾರ ಹಬ್ಬು
Published : 29 ಅಕ್ಟೋಬರ್ 2025, 4:14 IST
Last Updated : 29 ಅಕ್ಟೋಬರ್ 2025, 4:14 IST
ಫಾಲೋ ಮಾಡಿ
Comments
ಹಳಿಯಾಳ ತಾಲ್ಲೂಕಿನ ತೇಗ್ನಳ್ಳಿ ಗ್ರಾಮದ ಗದ್ದೆಯಲ್ಲಿ ಬೆಳೆದಿರುವ ಕಬ್ಬು
ಲಕ್ಷಾಂತರ ಸಾಲ ಮಾಡಿ ಟ್ರ್ಯಾಕ್ಟರ್ ಟ್ರಾಲಿ ಖರೀದಿಸಿ ತಂದಿದ್ದೇವೆ. 15 ದಿನವಾದರೂ ಕೆಲಸ ಸಿಗದೆ ಅತಂತ್ರರಾಗಿದ್ದೇವೆ
ತಾಂಡಾವೊಂದರ ಮುಖ್ಯಸ್ಥ
‘ಮಕ್ಕಳ ಮೇಲೆ ನಿಗಾ ಸವಾಲು’
‘ಕಬ್ಬು ಕಟಾವು ಮಾಡಲು ಬಂದ ತಾಂಡಾದ (ಟೋಲಿ) ಪುರುಷ ಸದಸ್ಯರು ಕಬ್ಬು ಕಟಾವು ಕೆಲಸಕ್ಕೆ ತೆರಳಿದರೆ ಅವರ ಜೊತೆ ಬರುವ ಮಹಿಳೆಯರು ತಾಂಡಾದ ಎಲ್ಲಾ ಜನರಿಗೆ ಅಡುಗೆ ಮಾಡುವುದರ ಜೊತೆಗೆ ಹೆಚ್ಚಿನ ದುಡಿಮೆಗೆ ಕಬ್ಬು ಕಟಾವು ಮಾಡಲು ನೆರವಾಗಬೇಕಾಗುತ್ತದೆ. ಬಹುತೇಕ ತಾಂಡಾಗಳಲ್ಲಿ ಚಿಕ್ಕ ಮಕ್ಕಳಿದ್ದು ಅವರನ್ನೂ ಕಬ್ಬು ಕಟಾವು ನಡೆಯುವ ಗದ್ದೆಗೆ ಕರೆದೊಯ್ಯವ ಅನಿವಾರ್ಯತೆ ಉಂಟಾಗುತ್ತದೆ. ಹೀಗೆ ಮಕ್ಕಳ ಮೇಲೆ ನಿಗಾ ಇಡುವುದೇ ಸವಾಲು’ ಎನ್ನುತ್ತಾರೆ ತಾಂಡಾವೊಂದರ ಮುಖ್ಯಸ್ಥ.