ಶಿರಸಿ: ನಗರದ ಅಡಿಕೆ ಮಾರುಕಟ್ಟೆಯಲ್ಲಿ ಕೆಂಪಡಿಕೆ ಶುಕ್ರವಾರ ಪ್ರತಿ ಕ್ವಿಂಟಲ್‍ಗೆ ಸರಾಸರಿ ₹51 ಸಾವಿರ ದರ ಕಂಡಿದೆ. ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಅಡಿಕೆ ದರ ಗಗನಮುಖಿಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಹೆಚ್ಚಿದ ದರದಿಂದಾಗಿ ಶಿರಸಿಯ ಟಿಎಸ್ಎಸ್, ಟಿಎಂಎಸ್ ಸಂಸ್ಥೆಗಳ ಅಡಿಕೆ ಮಾರುಕಟ್ಟೆಯಲ್ಲಿ ಆವಕ ಹೆಚ್ಚುತ್ತಿದೆ. ಟಿಎಸ್ಎಸ್ ಅಡಿಕೆ ವ್ಯಾಪಾರಿ ಅಂಗಳದಲ್ಲಿ ದಾಖಲೆಯ ದರಕ್ಕೆ ಹದಿನೈದು ಕ್ವಿಂಟಲ್‍ಗೂ ಹೆಚ್ಚು ಕೆಂಪಡಿಕೆ ಮಾರಾಟಗೊಂಡಿದೆ.

ಕಳೆದ ಕೆಲ ತಿಂಗಳಿನಿಂದ ₹40 ಸಾವಿರ ಆಸುಪಾಸಿನಲ್ಲಿ ಅಡಿಕೆ ಖರೀದಿ ಆಗುತ್ತಿತ್ತು. ನಾಲ್ಕು ದಿನಗಳ ಹಿಂದೆ ₹45 ಸಾವಿರ ದಾಟಿದ್ದ ದರ ಈಗ ಅರ್ಧ ಲಕ್ಷ ಬೆಲೆಗೆ ತಲುಪಿದೆ. ಇದು ಎರಡು ವರ್ಷಗಳಲ್ಲಿ ಶಿರಸಿ ಮಾರುಕಟ್ಟೆಯಲ್ಲಿ ಕೆಂಪಡಿಕೆ ಕಂಡ ದಾಖಲೆಯ ದರವಾಗಿದೆ. ಚಾಲಿ ಅಡಿಕೆ ದರವೂ ಸರಾಸರಿ ₹43 ಸಾವಿರಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.