ಕಾರವಾರ: ಒಂದೆಡೆ ಸಾಲು ಸಾಲು ಹೊಂಡ, ಇನ್ನೊಂದೆಡೆ ಅಪಾಯಕಾರಿ ತಿರುವುಗಳನ್ನು ಒಳಗೊಂಡಿರುವ ಜಿಲ್ಲೆಯ ಹೆದ್ದಾರಿಗಳು ‘ಅಪಘಾತ ವಲಯ’ವಾಗಿ ಮಾರ್ಪಡುತ್ತಿವೆ. ಪದೇ ಪದೇ ಒಂದೇ ಸ್ಥಳದಲ್ಲಿ ಹಲವು ಅಪಘಾತ ಸಂಭವಿಸುತ್ತಿದ್ದು, ಸಾವು ನೋವುಗಳಿಗೆ ಕಾರಣವಾಗುತ್ತಿದೆ.

ಜಿಲ್ಲೆಯ ಮೂಲಕ ಹಾದುಹೋದ ರಾಷ್ಟ್ರೀಯ ಹೆದ್ದಾರಿ–66, 69, 52 ಸೇರಿದಂತೆ ಪ್ರಮುಖ ರಾಜ್ಯ ಹೆದ್ದಾರಿಗಳ 12 ಸ್ಥಳಗಳನ್ನು ‘ಬ್ಲ್ಯಾಕ್ ಸ್ಪಾಟ್’ ಎಂದು ಪೊಲೀಸ್ ಇಲಾಖೆ ಗುರುತಿಸಿದೆ. ಅವುಗಳಲ್ಲಿ 7 ಸ್ಥಳಗಳಲ್ಲಿ ಅಪಘಾತ ತಡೆಗೆ ಫಲಕ ಅಳವಡಿಕೆ, ವೇಗ ನಿಯಂತ್ರಕ ಅಳವಡಿಕೆ ಮಾಡಿದ್ದೇವೆ ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ. ಆದರೂ, ಅಪಘಾತಗಳ ಪ್ರಮಾಣ ಮಾತ್ರ ತಗ್ಗುತ್ತಿಲ್ಲ ಎಂಬುದು ಜನರ ದೂರು.

ಹೊನ್ನಾವರ ತಾಲ್ಲೂಕಿನ ಸುಳೆಮುರ್ಕಿ ತಿರುವು, ಅಂಕೋಲಾದ ಕಂಚಿನಬಾಗಿಲ ತಿರುವು, ಅಗಸೂರು ಸಮೀಪದ ತಿರುವು, ಯಲ್ಲಾಪುರದ ಅರೆಬೈಲ್ ಘಟ್ಟ, ಕುಮಟಾದ ದೇವಿಮನೆ ಘಟ್ಟದ ತಿರುವು, ಶಿರಸಿಯ ಎಕ್ಕಂಬಿ ತಿರುವು ಸೇರಿ ಹಲವೆಡೆ ಅಪಘಾತಗಳ ಸಂಖ್ಯೆ ಪ್ರತಿ ವರ್ಷ ಎರಡಂಕಿ ದಾಡುತ್ತಿದೆ.

ಕಾರವಾರದ ಕಾಳಿ ಸೇತುವೆ ಸಮೀಪ, ಆರ್ಟಿಒ ಕಚೇರಿ ಎದುರು, ಮಾಜಾಳಿಯ ಗಾಂವಗೇರಿ ಕ್ರಾಸ್ ಬಳಿಯೂ ವಾಹನಗಳ ಮುಖಾಮುಖಿ ಡಿಕ್ಕಿ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.

‘ಪದೇ ಪದೇ ಅಪಘಾತಗಳು ಸಂಭವಿಸುವ ಸ್ಥಳಗಳಲ್ಲಿ ಕೂಲಂಕಷ ಪರಿಶೀಲನೆ ಕೈಗೊಂಡು ರಸ್ತೆ ಸರಿಪಡಿಸುವ, ವಾಹನ ಸವಾರರನ್ನು ಎಚ್ಚರಿಸುವ ಫಲಕಗಳನ್ನು ಅಳವಡಿಸುವ ಕೆಲಸ ನಡೆಯಬೇಕು. ಅಪಾಯಕಾರಿ ತಿರುವುಗಳಲ್ಲಿ ರಸ್ತೆ ವಿಸ್ತರಣೆ ಮಾಡಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಕಿಶೋರ ದೇಸಾಯಿ.

ಶಿರಸಿ–ಹುಬ್ಬಳ್ಳಿ ರಸ್ತೆಯಲ್ಲಿ, ಶಿರಸಿ ತಾಲ್ಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಗೇರಿ, ಹುಡೇಲಕೊಪ್ಪ ಹಾಗೂ ಎಕ್ಕಂಬಿ ಕ್ರಾಸ್ಗಳು ವಾಹನ ಸವಾರರಿಗೆ ಸದಾ ಸವಾಲು ನೀಡುವ ಪ್ರದೇಶವಾಗಿ ಮಾರ್ಪಟ್ಟಿವೆ.

‘ಮುಂದೆ ತಿರುವು ಇದೆ’ ಎಂಬ ಎಚ್ಚರಿಕೆ ಫಲಕ, ರಿಫ್ಲೆಕ್ಟರ್ಗಳಾಗಲಿ ರಸ್ತೆ ಅಕ್ಕಪಕ್ಕ ಇಲ್ಲ. ಅಪರಿಚಿತ ವಾಹನ ಸವಾರರಿಗೆ ಈ ಕ್ರಾಸ್ಗಳು ಜೀವಾಪಾಯ ತಂದೊಡ್ಡುತ್ತಿವೆ. ತಿಂಗಳಲ್ಲಿ ಕನಿಷ್ಠ 10 ಕ್ಕೂ ಹೆಚ್ಚು ಅಪಘಾತಗಳು ಈ ಪ್ರದೇಶದಲ್ಲಿ ಘಟಿಸುತ್ತವೆ’ ಎನ್ನುತ್ತಾರೆ ಬಿಸಲಕೊಪ್ಪದ ಶಂಕರ ನಾಯ್ಕ.

‘ಹೆದ್ದಾರಿಯುದ್ದಕ್ಕೂ ಎಲ್ಲಿಯೂ ಎಚ್ಚರಿಕೆ ಫಲಕ ಕಾಣದು. ತಿರುವುಗಳು, ರಸ್ತೆ ಕೂಡುವ ಜಾಗಗಳಲ್ಲಿ ಕೂಡ ಯಾವುದೇ ಫಲಕ ಇಲ್ಲದಿರುವುದು ಅಪಘಾತಗಳು ಹೆಚ್ಚಲು ಕಾರಣ’ ಎನ್ನುತ್ತಾರೆ ಅವರು.

ಅಂಕೋಲಾ ತಾಲ್ಲೂಕಿನಲ್ಲಿ ಬಹುತೇಕ ಕಡೆ ಅಪಘಾತ ವಲಯಗಳಿದ್ದು ಅದರಲ್ಲಿ ಪ್ರಮುಖವಾಗಿ ಅಂಕೋಲಾ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ನಡುವೆ ಬರುವ ಅಗಸೂರು ಸಮೀಪ ಕಂಚಿನಬಾಗಿಲು ಹತ್ತಿರ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.

‘ರಸ್ತೆ ಹದಗೆಟ್ಟಿರುವುದು ಒಂದಡೆಯಾದರೆ, ರಸ್ತೆ ಬದಿಯಲ್ಲಿ ಗಿಡ ಗಂಟಿಗಳು ಬೆಳೆದು ಎದುರು ಬರುವ ವಾಹನಗಳು ಸರಿಯಾಗಿ ಕಾಣದೇ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೇ ಕಳೆದ ಎರಡು ವರ್ಷಗಳಿಂದ ಹೆದ್ದಾರಿ ಪ್ರಾಧಿಕಾರದವರು ರಸ್ತೆ ದುರಸ್ಥಿ ಹಾಗೂ ಸರಿಯಾಗಿ ನಿರ್ವಹಣೆ ಮಾಡದೇ ಇರುವುದೇ ಅಪಘಾತಗಳಿಗೆ ಪ್ರಮುಖ ಕಾರಣ’ ಎಂಬುದು ಜನರ ದೂರು.

ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿರುವ ಪುರಲಕ್ಕಿಬೇಣ ಹಾಗೂ ಹುಲಿದೇವರವಾಡಕ್ಕೆ ಹೋಗಲು ಚತುಷ್ಪತ ಹೆದ್ದಾರಿ ದಾಟಿಯೇ ಹೋಗಬೇಕು. ನಿತ್ಯ ಶಾಲಾ - ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಕಾರ್ಮಿಕರು ವೇಗವಾಗಿ ಸಂಚರಿಸುವ ವಾಹನ ದಟ್ಟನೆಯಿಂದ ರಸ್ತೆ ದಾಟಾಲು ಪರದಾಡುತ್ತಿದ್ದಾರೆ ಎಂಬ ದೂರುಗಳಿವೆ.

ಹೊನ್ನಾವರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗೇರುಸೊಪ್ಪಾ ಸಮೀಪದ ಸೂಳೆಮುರ್ಕಿ ತಿರುವಿನಲ್ಲಿ ಪ್ರಸ್ತುತ ತಿಂಗಳೊಂದರಲ್ಲೇ 3 ಅಪಘಾತಗಳಾಗಿದ್ದು ಒಂದು ಸಾವು ಕೂಡ ಸಂಭವಿಸಿದೆ. ಕಳೆದ 4 ವರ್ಷಗಳಲ್ಲಿ ಇದೊಂದೇ ಸ್ಥಳದಲ್ಲಿ ಸಂಭವಿಸಿದ 40 ಅಪಘಾತಗಳಲ್ಲಿ 10 ಜನ ಮೃತಪಟ್ಟು 300ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಇದೇ ಹೆದ್ದಾರಿಯಲ್ಲಿ ಬಾಳೆಗದ್ದೆ, ಯಲಗುಪ್ಪ ಸೇರಿದಂತೆ ಇನ್ನೂ ಕೆಲವು ಅಪಾಯಕಾರಿ ತಿರುವುಗಳಿದ್ದು ಅಪಘಾತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಹಡಿನಬಾಳ ಸಮೀಪ ಗುಂಡಿಬೈಲ್ ರಸ್ತೆ ಬಂದು ಸೇರುವ ಜಾಗ ಅಪಘಾತ ವಲಯವಾಗಿದೆ. ಕೆಲವು ಹಳ್ಳಿ ರಸ್ತೆಗಳಲ್ಲೂ ವಾಹನ ಸಂಚಾರ ಮಿತಿ ಮೀರಿದ್ದು ರಸ್ತೆಗಳು ತೀರ ಕಿರಿದಾಗಿರುವುದರಿಂದ ಏಕಕಾಲದಲ್ಲಿ ಎರಡು ವಾಹನಗಳು ಸಂಚರಿಸಲು ಜಾಗವಿಲ್ಲದೆ ವಾಹನ ಸವಾರರು ಪರದಾಡುವುದು ನಿತ್ಯದ ದೃಶ್ಯವಾಗಿದೆ.

ಯಲ್ಲಾಪುರ–ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಆರ್ತಿಬೈಲ್ ಘಟ್ಟದ ತಿರುವಿನಲ್ಲಿ ನಿರಂತರವಾಗಿ ಟ್ರಕ್ ಪಲ್ಟಿ ನಡೆಯುತ್ತಿದೆ. ಇಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಫಲಕ ಅಳವಡಿಸಿಲ್ಲ ಎಂಬುದು ಜನರ ದೂರು. ಪಟ್ಟಣದ ವಿಶ್ವದರ್ಶನ ಎದುರಿನಲ್ಲಿ ಹಾಗೂ ಪೊಲೀಸ್ ಸ್ಟೇಶನ್ ಸರ್ಕಲ್ ನಲ್ಲಿ ಅತಿಯಾದ ಜನ ಸಂಚಾರ ಹಾಗೂ ವಾಹನ ಸಂಚಾರವಿದ್ದು ಇಲ್ಲಿ ಸುರಕ್ಷತಾ ಕ್ರಮ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರಾದ ಜನಾರ್ಧನ ಕೋಮಾರ.

ಹೆದ್ದಾರಿಗಳಲ್ಲಿನ ಅಪಘಾತ ವಲಯಗಳಲ್ಲಿ ಎಚ್ಚರಿಕೆ ಫಲಕ ಅಳವಡಿಕೆಯ ಜೊತೆಗೆ ವೇಗ ನಿಯಂತ್ರಕ ಅಳವಡಿಸಲು ಕ್ರಮವಹಿಸಲಾಗುತ್ತಿದೆ
ದೀಪನ್ ಎಂ.ಎನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಅಂಕೋಲಾದ ಹುಲಿದೇವರವಾಡಾ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸದಿದ್ದರೆ ಪಾದಚಾರಿಗಳಿಗೆ ಪದೇ ಪದೇ ಅಪಘಾತ ಉಂಟಾಗುವ ಸಮಸ್ಯೆ ಉಂಟಾಗಲಿದೆ
ರಾಘವೇಂದ್ರ ನಾಯ್ಕ ಹುಲಿದೇವರವಾಡಾ ಗ್ರಾಮಸ್ಥ

Quote

ಕಾರವಾರದ ಕಾಳಿ ಸೇತುವೆ ಬಳಿ ರಸ್ತೆಯ ತಿರುವು ಅಪಾಯಕಾರಿಯಾಗಿದೆ. ಇಲ್ಲಿ ಸವಾರರನ್ನು ಎಚ್ಚರಿಸುವ ಫಲಕ ಅಳವಡಿಸುವ ಕೆಲಸವಾಗಬೇಕು
ಶ್ಯಾಮನಾಥ ತಳೇಕರ ನಂದನಗದ್ದಾ ನಿವಾಸಿ

Quote -

ಅರೆಬರೆಯಾದ ವಿಸ್ತರಣೆ ಕಾಮಗಾರಿ

ಕುಮಟಾ ಪಟ್ಟಣದಲ್ಲಿ ಹೆದ್ದಾರಿ ವಿಸ್ತರಣೆ ನಡೆಸಿ ಸೇತುವೆ ರೇಲ್ವೆ ಸೇತುವೆ ವಿಸ್ತರಣೆ ಹಾಗೇ ಬಿಡಲಾಗಿದೆ. ತಾಲ್ಲೂಕಿನ ಅಳ್ವೆಕೋಡಿ ಮಣಕಿಯಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ನಿಂತು ಪಟ್ಟಣ ಸೇರುವ ಪ್ರದೇಶ ರಸ್ತೆ ಕಿರಿದಾಗುತ್ತಿದೆ. ಇದರಿಂದ ಅಪಘಾತ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ’ ಎಂದು ಪಟ್ಟಣದ ಉದ್ಯಮಿ ಅರವಿಂದ ಪೈ ಆರೋಪಿಸಿದರು. ‘ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಅಲ್ಲಲ್ಲಿ ತುಂಡು ರಸ್ತೆ ಸೇರಿ ಒಟ್ಟೂ ಹೆದ್ದಾರಿ ಉದ್ದ 1.20 ಕಿ.ಮೀ. ಕಾಮಗಾರಿ ಬಾಕಿ ಇದ್ದು ಮಾರ್ಚ್ ಅಂತ್ಯದ ವೇಳೆ ಅವುಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.