ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ಸಂಪರ್ಕ: ಭಟ್ಕಳ ಮಹಿಳೆ ವಶಕ್ಕೆ

Published 25 ಜನವರಿ 2024, 18:56 IST
Last Updated 25 ಜನವರಿ 2024, 18:56 IST
ಅಕ್ಷರ ಗಾತ್ರ

ಭಟ್ಕಳ: ಮುಂಬೈನಲ್ಲಿ ಬಂಧನವಾದ ಉಗ್ರನೊಬ್ಬನ ಜೊತೆ ನಂಟು ಹೊಂದಿರುವ ಭಟ್ಕಳದ ಮಹಿಳೆಯ ಮನೆಯ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ಮುಂಬೈ ಎಟಿಎಸ್‌ ತಂಡ ಮಹಿಳೆಯನ್ನು ವಶಕ್ಕೆ ಪಡೆದು ಗುರುವಾರ ಭಟ್ಕಳದಲ್ಲೇ ವಿಚಾರಣೆ ನಡೆಸಿದೆ.

ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಜೊತೆ ನಂಟು ಹೊಂದಿರುವ ಮಹಾರಾಷ್ಟ್ರದ ನಾಸಿಕ್‌ನ ಒಬ್ಬ ಯುವಕನನ್ನು ಮುಂಬೈ ಎಟಿಎಸ್ ತಂಡ ಬಂಧಿಸಿತ್ತು. ಆತನ ಜೊತೆ ಸಂಪರ್ಕದಲ್ಲಿದ್ದ ಮುಂಬೈಯ ಒಬ್ಬ ಮಹಿಳೆಯನ್ನು ಬಂಧಿಸಿರುವ ಎಟಿಎಸ್ ತಂಡ ಅವರ ಸಂಪರ್ಕದಲ್ಲಿದ್ದ ಭಟ್ಕಳದ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಜಾದ ನಗರದ ಆಯಿಷಾ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

‘ಆಯಿಷಾ ಪತಿಯು ಮೃತಪಟ್ಟಿದ್ದು, ತಂದೆ ತಾಯಿ ಮಕ್ಕಳ ಜೊತೆ ವಾಸವಿದ್ದಾರೆ. ಸ್ಥಳೀಯ ಮದರಸಾದಲ್ಲಿ ಶಿಕ್ಷಕಿ ಆಗಿರುವ ಅವರು ಹೆಣ್ಣುಮಕ್ಕಳಿಗೆ ಧರ್ಮಶಿಕ್ಷಣ ಬೋದಿಸುತ್ತಾರೆ. ಬಂಧಿತ ಉಗ್ರನಿಗೆ ಹಣ ವರ್ಗಾವಣೆ ಮಾಡಿರುವ ಮತ್ತು ನೇರ ಸಂಪರ್ಕ ಇರುವ ಬಗ್ಗೆ ತನಿಖೆ ನಡೆದಿದೆ. ಅವರ ಮನೆಯನ್ನು ಶೋಧಿಸಿರುವ ತಂಡ ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT