ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ | ಬಾಗಿಲು ಮುರಿದು ಅರಣ್ಯ ಸಿಬ್ಬಂದಿ ಮನೆಯಲ್ಲಿ ಕಳ್ಳತನ

Published 29 ಏಪ್ರಿಲ್ 2024, 12:15 IST
Last Updated 29 ಏಪ್ರಿಲ್ 2024, 12:15 IST
ಅಕ್ಷರ ಗಾತ್ರ

ಮುಂಡಗೋಡ: ಇಲ್ಲಿನ ಮಾರಿಕಾಂಬಾ ನಗರದಲ್ಲಿ ಅರಣ್ಯ ಸಿಬ್ಬಂದಿ ವಾಸವಿದ್ದ ಎರಡು ಮನೆಗಳಲ್ಲಿ ಕಳವು ನಡೆದದ್ದು, ಭಾನುವಾರ ತಿಳಿದು ಬಂದಿದೆ.

ಅರಣ್ಯ ಸಿಬ್ಬಂದಿ ಮುತ್ತುರಾಜ ಹಿರೇಕಣಗಿ ಹಾಗೂ ಅಮಿತ್‌ ಸಣ್ಣಕ್ಕಿ ಇಬ್ಬರೂ ಒಂದೇ ಕಟ್ಟಡದ ಕೆಳಗೆ ಹಾಗೂ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಶನಿವಾರ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಕಳವು ಆಗಿರಬಹುದು ಎಂದು ಶಂಕಿಸಲಾಗಿದೆ.

ಎರಡೂ ಮನೆಗಳ ಬಾಗಿಲಿನ ಲಾಕ್ ಮುರಿಯಲಾಗಿದೆ. ಮೇಲಿನ ಮಹಡಿಯಲ್ಲಿರುವ ಅಮಿತ್‌ ಸಣ್ಣಕ್ಕಿ ಅವರ ಮನೆಯಲ್ಲಿ 15ಗ್ರಾಂ ಚಿನ್ನ ಮತ್ತು ಮುತ್ತಣ್ಣ ಅವರ ಮನೆಯಲ್ಲಿ ಆರು ಸಾವಿರ ನಗದು ಕಳವಾಗಿದೆ.

ಭಾನುವಾರ ಸಂಜೆ ಕ್ರೈಂ ವಿಭಾಗದ ಪಿಎಸ್ಐ ಹನಮಂತ ಕುಡಗುಂಟಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT