ಕಾರವಾರ: ಜಿಲ್ಲೆಯಲ್ಲಿ ಸೋಮವಾರ 36 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅವರಲ್ಲಿ ಕುಮಟಾದ 14, ಭಟ್ಕಳದ ಏಳು,ಹಳಿಯಾಳದ ಆರು, ಹೊನ್ನಾವರದ ನಾಲ್ವರು, ಯಲ್ಲಾಪುರ ಮತ್ತು ಕಾರವಾರದ ತಲಾ ಇಬ್ಬರು, ಶಿರಸಿಯ ಒಬ್ಬರು ಸೇರಿದ್ದಾರೆ.

ಸೋಂಕಿತರಲ್ಲಿ 21 ಪುರುಷರು, ಏಳು ಮಹಿಳೆಯರು ಹಾಗೂ ಎಂಟು ಮಕ್ಕಳಿದ್ದಾರೆ.ಆರು ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಭಟ್ಕಳದ ಮತ್ತು ಹೊನ್ನಾವರದ ತಲಾ ಒಬ್ಬರು ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.ಹಳಿಯಾಳದ ಒಬ್ಬರು, ಹೊನ್ನಾವರ ಮತ್ತು ಕಾರವಾರದ ತಲಾ ಇಬ್ಬರು ಹೊರ ರಾಜ್ಯ ಪ್ರವಾಸ ಮಾಡಿ ವಾಪಸ್ ಬಂದವರಾಗಿದ್ದಾರೆ.

ಭಟ್ಕಳದ ಇಬ್ಬರು, ಕುಮಟಾದ ಎಲ್ಲ 14, ಹೊನ್ನಾವರದ ಒಬ್ಬರು ಈಗಾಗಲೇ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಕುಮಟಾದ ಒಬ್ಬರಿಗೆ ಜ್ವರದ ಲಕ್ಷಣಗಳಿದ್ದು (ಐ.ಎಲ್.ಐ), ಅವರ ಸೋಂಕಿನ ಮೂಲವನ್ನೂ ಹುಡುಕಲಾಗುತ್ತಿದೆ. ಭಟ್ಕಳದ ಸೋಂಕಿತರೊಬ್ಬರಿಗೆ ಉಸಿರಾಟದ ತೀವ್ರ (ಎಸ್.ಎ.ಆರ್.ಐ) ಸಮಸ್ಯೆಯಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

633ಒಟ್ಟು ಸೋಂಕಿತರು

374ಸಕ್ರಿಯ ಪ್ರಕರಣಗಳು

254ಗುಣಮುಖರಾದವರು

5ಮೃತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.