ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಟಾ | ಜೀವ ಬೆದರಿಕೆ: ಪ್ರಕರಣ ದಾಖಲು

Published 27 ಜೂನ್ 2024, 13:16 IST
Last Updated 27 ಜೂನ್ 2024, 13:16 IST
ಅಕ್ಷರ ಗಾತ್ರ

ಕುಮಟಾ: ಇಲ್ಲಿಯ ಗ್ರಾಮ ಆಡಳಿತಾಧಿಕಾರಿ ಹಾಗೂ ಪ್ರಭಾರಿ ಆಹಾರ ನಿರೀಕ್ಷಕ ಅಣ್ಣಯ್ಯ ಲಂಬಾಣಿ ಎನ್ನುವವರಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ ಕುರಿತು ತಾಲ್ಲೂಕಿನ ಧಾರೇಶ್ವರದ ಅಕ್ಷಯ ನಾಯ್ಕ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರ ಕೆಲಸ ಮಾಡಿಕೊಡಲು ಅಣ್ಣಯ್ಯ ಲಂಬಾಣಿ ಹಣ ಬೇಡಿಕೆ ಇಟ್ಟು ಜನರಿಗೆ ಸತಾಯಿಸುತ್ತಿದ್ದಾರೆ ಎಂದು ಈಚೆಗೆ ಅಕ್ಷಯ ನಾಯ್ಕ ಅವರು ಉಪವಿಭಾಗಾಧಿಕಾರಿ ಅವರಿಗೆ ದೂರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಜೂನ್ 20ರಂದು ತಹಶೀಲ್ದಾರ್ ಅವರು ದೂರು ಅರ್ಜಿ ವಿಚಾರಣೆ ನಡೆಸಿದ್ದರು. ವಿಚಾರಣೆ ಮುಗಿಸಿ ಕಚೇರಿಯಿಂದ ಹೊರಗೆ ಬರುವಾಗ ಅಕ್ಷಯ ನಾಯ್ಕ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಪಿಎಸ್ಐ ಮಂಜುನಾಥ ಗೌಡರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT