ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಜೊತೆ ಒಡಂಬಡಿಕೆ 

Published 26 ಆಗಸ್ಟ್ 2023, 12:34 IST
Last Updated 26 ಆಗಸ್ಟ್ 2023, 12:34 IST
ಅಕ್ಷರ ಗಾತ್ರ

ಹಳಿಯಾಳ: ಇಲ್ಲಿನ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಉತ್ಕೃಷ್ಟ ಕೌಶಲ ಸಂವರ್ಧನ ತರಬೇತಿಗಾಗಿ ವಾಹನ ಉತ್ಪಾದನಾ ಸಂಸ್ಥೆಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.

ಶುಕ್ರವಾರ ಬೆಂಗಳೂರಿನ ಟೊಯೋಟಾ ಟ್ರೈನಿಂಗ್ ಸೆಂಟರ್‌ನಲ್ಲಿ ಒಡಂಬಡಿಕೆ ಪ್ರಕ್ರಿಯೆ ಜರುಗಿದ್ದು ಟೊಯೋಟಾ ಡೆಪ್ಯೂಟಿ ಜನರಲ್ ಮ್ಯಾನೇಜರ್ ವೆಂಕಟೇಶ್ ಹಾಗೂ ಡಿಪಿಐಟಿಐ ಪ್ರಾಂಶುಪಾಲ ದಿನೇಶ್ ಆರ್. ನಾಯ್ಕ್ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಂಡರು.

ಒಡಂಬಡಿಕೆಯ ಕುರಿತು ಪ್ರಾಚಾರ್ಯ ದಿನೇಶ ನಾಯ್ಕ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಈಗಾಗಲೇ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಉತ್ಕೃಷ್ಟ ಗುಣಮಟ್ಟದ ತರಬೇತಿಯನ್ನು ನೀಡುವ ಸಲುವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಜೊತೆ ಎಂ.ಎಂ.ವಿ, ಆಟೋಮೋಟಿವ್ ಪೇಂಟ್ ರಿಪೇರ್, ಆಟೋಮೊಟಿವ್ ಬಾಡಿ ರಿಪೇರ್ ವೃತ್ತಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಇದಕ್ಕೆ ಫಿಟ್ಟರ್ ವೃತ್ತಿಯನ್ನು ಸಹ ಸೇರ್ಪಡೆಗೊಳಿಸಲಾಗಿದೆ’ ಎಂದರು.

‘ಈ ಒಪ್ಪಂದದ ಪ್ರಕಾರ ಫಿಟ್ಟರ್ ವೃತ್ತಿಯ ತರಬೇತಿಯ ಜೊತೆಗೆ ‘ಅಸೆಂಬ್ಲಿ ಫಿಟ್ಟರ್‘ ಎಂಬ ಎರಡು ವಾರದ ತರಬೇತಿಯನ್ನು ಸಂಯೋಜಿಸಲಾಗಿದ್ದು ಪ್ರಸ್ತುತ ಕೈಗಾರಿಕೆಗಳಿಗೆ ಬೇಕಾದ ಕೌಶಲದ ಅಗತ್ಯತೆಯನ್ನು ಪೂರೈಸುತ್ತದೆ. ಇವರಿಗೆ ಹೆಚ್ಚಿನ ಉದ್ಯೋಗವಕಾಶಗಳು ಲಭ್ಯವಿದ್ದು ಟಿಕೆಎಂ ಸಹ ತನ್ನ ಉದ್ಯೋಗದ ನೇಮಕಾತಿಯಲ್ಲಿ ಆದ್ಯತೆಯನ್ನು ನೀಡುವ ಭರವಸೆಯನ್ನು ನೀಡಿದ್ದಾರೆ’ ಎಂದರು.

ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿಗಾಗಿ ಹಾಗೂ ಕೌಶಲ್ಯ ಸಂವರ್ಧನ ತರಬೇತಿಗಾಗಿ ವಾಹನ ಉತ್ಪಾದನ ಸಂಸ್ಥೆಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಜೊತೆ ಒಡಂಬಡಿಕೆಯನ್ನುಟೊಯೋಟಾ ಡೆಪ್ಯೂಟಿ ಜನರಲ್ ಮ್ಯಾನೇಜರ್ ವೆಂಕಟೇಶ್ ಹಾಗೂ ಡಿಪಿಐಟಿಐ ಪ್ರಾಂಶುಪಾಲರಾದ ದಿನೇಶ್ ಆರ್ ನಾಯ್ಕ್ ವಿನಿಮಯ ಮಾಡಿಕೊಂಡರು.
ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿಗಾಗಿ ಹಾಗೂ ಕೌಶಲ್ಯ ಸಂವರ್ಧನ ತರಬೇತಿಗಾಗಿ ವಾಹನ ಉತ್ಪಾದನ ಸಂಸ್ಥೆಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಜೊತೆ ಒಡಂಬಡಿಕೆಯನ್ನುಟೊಯೋಟಾ ಡೆಪ್ಯೂಟಿ ಜನರಲ್ ಮ್ಯಾನೇಜರ್ ವೆಂಕಟೇಶ್ ಹಾಗೂ ಡಿಪಿಐಟಿಐ ಪ್ರಾಂಶುಪಾಲರಾದ ದಿನೇಶ್ ಆರ್ ನಾಯ್ಕ್ ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT