ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಂಡೇಲಿ | ಪರಿಸರ ಸ್ನೇಹಿ ಗಣೇಶ ಬಳಸಿ: ರೋಟರಿ ಕ್ಲಬ್‌ನಿಂದ ಜಾಗೃತಿ ಜಾಥಾ

Published 31 ಆಗಸ್ಟ್ 2024, 13:14 IST
Last Updated 31 ಆಗಸ್ಟ್ 2024, 13:14 IST
ಅಕ್ಷರ ಗಾತ್ರ

ದಾಂಡೇಲಿ: ರೋಟರಿ ಕ್ಲಬ್, ಪೊಲೀಸ್ ಇಲಾಖೆ ಮತ್ತು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಸಹಯೋಗದಲ್ಲಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಮಣ್ಣಿನ ಗಣಪತಿ ಮೂರ್ತಿ ಪ್ರಚಾರ ಮತ್ತು ಪಿಒಪಿ ಗಣೇಶಮೂರ್ತಿ ಬಳಸದಂತೆ ಜಾಗೃತಿ ಜಾಥಾ ಶನಿವಾರ ನಡೆಯಿತು.

ರೋಟರಿ ಶಾಲೆಯಿಂದ ಪ್ರಾರಂಭವಾದ ಈ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಲಮಾಲಿನ್ಯ ಹಾಗೂ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳ ಭಿತ್ತಿ ಪತ್ರಗಳ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಜಾಥಾದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಾಹುಲ್ ಬಾವಾಜಿ, ಕಾರ್ಯದರ್ಶಿ ಅಶುತೋಷ್ ಕುಮಾರ್ ರೈ, ಕೋಶಾಧಿಕಾರಿ ಲಿಯೋ ರಫೆಲ್ ಪಿಂಟೋ, ಎಸ್.ಜಿ.ಬಿರಾದಾರ, ಪ್ರಕಾಶ ಕನ್ಮೆಹಳ್ಳಿ, ಆರ್.ಪಿ.ನಾಯ್ಕ, ಅಭಿಷೇಕ, ಕನ್ಯಾಡಿ, ಆಸಿಫ್ ದಫೇದಾರ, ಅನುಪ್ ಮಾಡೋಳ್ಕರ, ಮಿಥುನ ನಾಯಕ, ಸುಧಾಕರ ಶೆಟ್ಟಿ, ವೆಸ್ಟ್ ಕೋಸ್ಟ್ ಪೇಪರ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ, ನಗರ ಠಾಣೆಯ ಪಿಎಸ್‌ಐ ಗಡೇಕರ್, ಸಿಬ್ಬಂದಿ ಜಾಥಾದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT