ಸಿದ್ದಾಪುರ: ರಾಜ್ಯ ಸರ್ಕಾರದಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಹೊಸ ಮನೆ ಮಂಜೂರು ಆಗಿಲ್ಲ. ಈಗಾಗಲೇ ಇದ್ದ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬ ನೀತಿ ಹಾಗೂ ಭ್ರಷ್ಟಾಚಾರ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 229 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದರು.

ತಾಲ್ಲೂಕಿನ ತಾರೆಹಳ್ಳಿ - ಕಾನಸೂರು ಗ್ರಾಮ ಪಂಚಾಯಿತಿ ಬಳಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸೋಮವಾರ ಅವರು ಮಾತನಾಡಿದರು.

ಸರ್ಕಾರದ ಆಡಳಿತ ಹೇಗಿದೆ ಎಂಬುದನ್ನು ಅವರದೇ ಪಕ್ಷದ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ. ತಾನು ಮೂರು ಬಾರಿ ಮನೆ ಹಂಚಿಕೆಗಾಗಿ ಪಟ್ಟಿ ಮಾಡಿ ಕೊಟ್ಟರೂ ಮನೆ ಬಂದಿಲ್ಲ. ರೊಕ್ಕ ಕೊಟ್ಟವರಿಗೆ ಮನೆ ಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಇದಕ್ಕೆ ಸಾಕ್ಷಿ. ಸ್ವಪಕ್ಷದ ಶಾಸಕರೇ ಸರ್ಕಾರದ ಧೋರಣೆ ಹಾಗೂ ಮಂತ್ರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಶಿಪ್ರಭಾ ಹೆಗಡೆ, ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ತಾ.ಪಂ ಮಾಜಿ ಸದಸ್ಯ ಮಾಬ್ಲೇಶ್ವರ ಹೆಗಡೆ, ಗ್ರಾಮ ಪಂಚಾಯಿತಿ ಸದಸ್ಯರಾದ ವೀರಭದ್ರ, ಮಾಲಿನಿ ನಾಯ್ಕ, ಪ್ರಮುಖರಾದ ಬಲರಾಮ ನಾಮಧಾರಿ, ಗಣೇಶ ನಾಯ್ಕ, ಲೋಕೇಶ ಭಟ್, ನರಸಿಂಹ ಹೆಗಡೆ, ನಾಗರಾಜ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.