ಶಿರಸಿ: ನಗರದ ಎಪಿಎಂಸಿ ವ್ಯಾಪ್ತಿಯಲ್ಲಿ ಕಾಳು ಮೆಣಸಿನ ದರ ದಿಢೀರ್ ಏರಿಕೆಯಾಗುತ್ತಿದೆ. ಕೇವಲ ನಾಲ್ಕು ದಿನಗಳಲ್ಲಿ ₹13 ಸಾವಿರ ಏರಿಕೆಯಾಗಿ ₹63 ಸಾವಿರದ ಗಡಿ ದಾಟಿದೆ.
ಶಿರಸಿ ಟಿಎಸ್‌ಎಸ್ ಮಾರುಕಟ್ಟೆಯಲ್ಲಿ ಶುಕ್ರವಾರ ಕ್ವಿಂಟಾಲ್‌ಗೆ ಗರಿಷ್ಠ ₹51,189 ಕ್ಕೆ ಮಾರಾಟವಾಗಿತ್ತು. ಶನಿವಾರ ಏಕಾಏಕಿ ₹5 ಸಾವಿರ ಏರಿ ಕ್ವಿಂಟಾಲ್‌ಗೆ ₹56 ಸಾವಿರ ಬೆಲೆ ದೊರಕಿತ್ತು. ಸೋಮವಾರ ಮಾರಾಟ ಬೆಲೆ ₹61,699 ತಲುಪಿತ್ತು. ಮಂಗಳವಾರ ₹63,508 ಗರಿಷ್ಠ ದರ ದಾಖಲಾಗಿದೆ. ಇದು ಇತ್ತೀಚಿನ ವರ್ಷಗಳ ದಾಖಲೆ ಬೆಲೆಯಾಗಿದೆ.
2017ರಲ್ಲಿ ಕಾಳು ಮೆಣಸಿನ ಬೆಲೆ ₹60 ಸಾವಿಕ್ಕಿಂತ ಹೆಚ್ಚಿತ್ತು. ಅಂದು ಇಳಿಕೆ ಕಂಡಿದ್ದು, ಮತ್ತೆ ಏರಿರಲಿಲ್ಲ. ಇತ್ತೀಚೆಗೆ ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಕಾಳು ಮೆಣಸಿನ ಪ್ರಮಾಣ ಕಡಿಮೆ ಇದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಹಾಗಾಗಿ ಕಾಳು ಮೆಣಸಿಗೆ ಮತ್ತೆ ಬೇಡಿಕೆ ಬಂದಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.