ಜೊಯಿಡಾ: ವಿಆರ್ಎಲ್ ಸಮೂಹ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ತಾಲ್ಲೂಕಿನ ಚನ್ನಬಸವೇಶ್ವರ ಪ್ರೌಢಶಾಲೆಗೆ ಒಂದು ಹೊಸ ಶಾಲಾ ಬಸ್ ಅನ್ನು ಈಚೆಗೆ ಕೊಡುಗೆಯಾಗಿ ನೀಡಲಾಗಿದೆ.

ತಾಲ್ಲೂಕಿನ ಉಳವಿ ಚನ್ನಬಸವೇಶ್ವರ ಪ್ರೌಢಶಾಲೆಗೆ ಸುತ್ತ ಮುತ್ತಲಿನ ಹಲವು ವಿದ್ಯಾರ್ಥಿಗಳು ನಡೆದುಕೊಂಡು, ಖಾಸಗಿ ವಾಹನಗಳಲ್ಲಿ ಬರುತ್ತಿದ್ದು ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶಾಲಾ ಮಂಡಳಿಯ ಮನವಿಯ ಮೇರೆಗೆ ಸಂಸ್ಥೆಯು ಬಸ್ ಕೊಡುಗೆ ನೀಡಿದೆ.

ವಿಆರ್ ಎಲ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಾ ಆನಂದ ಸಂಕೇಶ್ವರ ಉಳವಿ ಚನ್ನಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಸಂಜಯ ಕಿತ್ತೂರ ಅವರಿಗೆ ಬಸ್ನ ಚಾವಿ ಹಸ್ತಾಂತರಿಸಿದರು.

ಉಳವಿ ಚನ್ನಬಸವೇಶ್ವರ ಟ್ರಸ್ಟ್ ಉಪಾಧ್ಯಕ್ಷ ಪ್ರಕಾಶ್ ಕಿತ್ತೂರ, ಸದಸ್ಯರಾದ ಗಂಗಾಧರ ಕಿತ್ತೂರ, ಡಿ.ಸಿ. ಉಮಾಪತಿ, ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮೊಕಾಶಿ, ಪ್ರಧಾನ ಅರ್ಚಕ ಕಲ್ಮಠಶಾಸ್ತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.