ಭಟ್ಕಳ (ಉತ್ತರ ಕನ್ನಡ): ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಯುದ್ಧ ಭೀತಿಯಿಂದ ಭಟ್ಕಳದ ಅನಿವಾಸಿ ಭಾರತಿಯರ ಕುಟುಂಬದವರಿಗೆ ಮತ್ತು ಭಟ್ಕಳದಿಂದ ಹಜ್ ಉಮ್ರಾಗೆ ಯಾತ್ರಿಗಳು ಆತಂಕದಲ್ಲಿದ್ದಾರೆ.

ಪಟ್ಟಣದ ಸಾವಿರಾರು ಮಂದಿ ದುಬೈ, ಕತಾರ್, ಒಮನ್, ಸೌದಿ ಅರೇಬಿಯಾ ಸೇರಿ ಅರಬ್ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುತ್ತಾರೆ. ಭಟ್ಕಳದ ಅನಿವಾಸಿ ಭಾರತೀಯರ ಸ್ವಂತ ಉದ್ಯಮ ಕೂಡ ಈ ರಾಷ್ಟ್ರಗಳಲ್ಲಿದೆ. ಭಟ್ಕಳದಿಂದ ನಿತ್ಯ ನೂರಾರು ಜನರು ಮಂಗಳೂರು, ಗೋವಾ, ಮುಂಬೈನಿಂದ ಅರಬ್ ದೇಶಕ್ಕೆ ಹೋಗುತ್ತಾರೆ.

‘ನನ್ನ ಮಗ ಮೊಹಮ್ಮದ್ ಅಷ್ಫಾಕ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ಹಬ್ಬಕ್ಕೆ 15 ದಿನ ಮೊದಲು ಇಲ್ಲಿಗೆ ಬರಲು ಸಿದ್ಧತೆ ಮಾಡಿಕೊಂಡಿದ್ದ. ಸೋಮವಾರ ಕರೆ ಮಾಡಿ ಪರಿಸ್ಥಿತಿ ತಿಳಿಯಾದರೆ ಮಾತ್ರ ಊರಿಗೆ ಬರುವೆ’ ಎಂದಿದ್ದಾನೆ ಎಂದು ಅಬ್ದುಲ್ ರಹೀಂ ತಿಳಿಸಿದರು.

‘ರಂಜಾನ್ ಮಾಸದ ಕೊನೆಯ 10 ದಿನದ ಉಪವಾಸ, ಪ್ರಾರ್ಥನೆಯನ್ನು ಮೆಕ್ಕಾದ ಮಸೀದಿಯಲ್ಲಿ ಉಳಿದು ಆಚರಿಸಲು ಸಿದ್ಧರಾಗಿದ್ದ ಪಟ್ಟಣದ 50ಕ್ಕೂ ಹೆಚ್ಚು ಜನರ ಟಿಕೆಟ್ ರದ್ದುಗೊಂಡಿದೆ. ಪವಿತ್ರ ಆಚರಣೆ ಕೈತಪ್ಪಿದ್ದಕ್ಕೆ ನಿರಾಸೆಯಾಗಿದೆ’ ಎಂದು ಹಿರಿಯರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.