ಮುಂಡಗೋಡ: ತಾಲ್ಲೂಕಿನ ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ಅರಣ್ಯ ಪ್ರದೇಶದಲ್ಲಿ ರುಂಡವಿಲ್ಲದ ಮಹಿಳೆಯ ಮೃತದೇಹ ಪತ್ತೆಯಾದ ಸ್ಥಳಕ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ತನಿಖಾ ತಂಡದ ಜೊತೆ ಚರ್ಚಿಸಿ, ಪ್ರಕರಣ ಭೇದಿಸಲು ಸೂಕ್ತ ಸಲಹೆ ನೀಡಿದರು. ಗ್ರಾಮಕ್ಕೆ ಹೋಗುವ ರಸ್ತೆಯಿಂದ ಕೆಲವೇ ಮೀಟರ್ಗಳ ಅಂತರದಲ್ಲಿ, ಅನಾಮಧೇಯ ಮಹಿಳೆಯ ಶವ ನಗ್ನ ಸ್ಥಿತಿಯಲ್ಲಿ ಶುಕ್ರವಾರ ಕಂಡುಬಂದಿತ್ತು.

ಅಂದಾಜು 45ರಿಂದ 50 ವಯಸ್ಸಿನ ಮಹಿಳೆಯ ಶವ ಇದಾಗಿದ್ದು, ಕೊರಳಲ್ಲಿ ಶಿವದಾರದ ಜೊತೆಗೆ ಲಿಂಗದಕಾಯಿ ಇರುವುದು ಕಂಡುಬಂದಿದೆ. ಮೃತದೇಹವನ್ನು ಗಿಡಮರಗಳ ಎಲೆಗಳಿಂದ ಮುಚ್ಚಿಡಲಾಗಿತ್ತು.

ರುಂಡ ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿರುವ ಮೃತದೇಹದ ಗುರುತು ಕಂಡುಹಿಡಿಯುವುದು ಪೊಲೀಸರಿಗೆ ಸವಾಲಾಗಿದ್ದು, ಕೊಲೆ ಮಾಡಿರುವ ಆರೋಪಿಗಳನ್ನು ಭೇದಿಸಲು ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿದ್ದಾರೆ. ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.