ಸಿದ್ದಾಪುರ: ಲಾಕ್‌ಡೌನ್ ಸಮಯ ಬಳಸಿಕೊಂಡಿರುವ ಪದವೀಧರ ಯುವಕರು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ದುಬಾರಿ ಬೆಲೆ ಕಪ್ಪು ಅಕ್ಕಿಯ ಭತ್ತದ ತಳಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.

ನೆಲ್ಯಹುದಿಕೇರಿ ಗ್ರಾಮದವರಾದ ಮೆಕಾನಿಕಲ್ ಎಂಜಿನಿಯರ್ ಸಾಯೂಜ್, ಸಾಫ್ಟವೇರ್ ಎಂಜಿನಿಯರ್ ಶ್ರೇಯಸ್, ಬಿ.ಕಾಂ ಪದವೀಧರ ಶೌಕತ್ ಅವರು, ಲಾಕ್‌ಡೌನ್ ಸಂದರ್ಭವನ್ನು ವಿನೂತನ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಿರುವುದರ ಫಲದ ಭಾಗವಾಗಿ ನ್ಲವತ್ತೇಕ್ರೆ ಗ್ರಾಮದ 5 ಏಕರೆ ಗದ್ದೆಯಲ್ಲಿ ಭತ್ತ ಬೆಳೆದು ನಿಂತಿದೆ.

ಕೊರೊನಾದಿಂದಾಗಿ ಕೆಲಸ ಇಲ್ಲದೇ ಇರುವ ವೇಳೆ ಪಾಳು ಬಿಟ್ಟಿದ್ದ 5 ಏಕರೆ ಗದ್ದೆಯಲ್ಲಿ ದುಬಾರಿ ಬೆಲೆ ಕಪ್ಪುಅಕ್ಕಿಯ ಭತ್ತದ ತಳಿ ಜೀವ ತಳಿದು ನಿಂತಿದೆ. ಪಾಳು ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ. 2 ಏಕರೆಯಲ್ಲಿ ಕಪ್ಪು ಅಕ್ಕಿಯ ಭತ್ತ ಬೆಳೆಸಲಾಗಿದೆ. ಉಳಿದ ಗದ್ದೆಯಲ್ಲಿ ದೊಡ್ಡಿ ಅಕ್ಕಿ, ಕೊಡಗು ಜೀರಿಗೆ ಅಕ್ಕಿ, ತನು ತಳಿ ಭತ್ತ ಬೆಳೆಸಲಾಗಿದೆ. ಕಪ್ಪು ಅಕ್ಕಿಯಲ್ಲಿ ಮಣಿಪುರ ಹಾಗೂ ಬರ್ಮಾ ತಳಿ ಕೂಡ ನಾಟಿ ಮಾಡಲಾಗಿದೆ. ಬರ್ಮಾ ಮಾರುಕಟ್ಟೆಯಲ್ಲಿ ಕಪ್ಪು ಅಕ್ಕಿಗೆ ಬಹುಬೇಡಿಕೆ ಇದ್ದು, ಪ್ರತಿ ಕೆ.ಜಿ ಅಕ್ಕಿಗೆ ₹ 300 ಬೆಲೆ ಇದೆ ಎಂದು ಹೇಳಲಾಗುತ್ತಿದೆ.

ನೆಲ್ಯಹುದಿಕೇರಿ ಸಾಯೂಜ್ ಮೆಕಾನಿಕಲ್ ಎಂಜಿನಿಯರ್ ದುಬೈಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಫ್ಟವೇರ್ ಎಂಜಿನಿಯರ್ ಆಗಿರುವ ಶ್ರೇಯಸ್, ಸ್ಥಳೀಯ ಡಾಮಿನಸ್ ಯುವಕ ಸಂಘದ ಅಧ್ಯಕ್ಷ ಹಾಗೂ ಯುವ ಕೃಷಿಕ ಶೌಕತ್, ಕೆ.ಟಿ ಶಾಜಿ ಅವರು ಸೇರಿಕೊಂಡು ಕೃಷಿ ಆರಂಭಿಸಿದ್ದರು. ಚತ್ತೀಸ್‌ಗಡದಿಂದ ಕಪ್ಪು ಅಕ್ಕಿಯ ಭತ್ತದ ತಳಿಯ ಬೀಜ ತಂದು ಉತ್ತನೆ ಮಾಡಿದ್ದರು.

ಆ್ಯಪ್ ಮೂಲಕ ಮಾರಾಟದ ಚಿಂತನೆ: ಸಾಫ್ಟವೇರ್ ಎಂಜಿನಿಯರ್ ಆಗಿರುವ ಶ್ರೇಯಸ್ ಡ್ರಾಪ್‌ಔಟ್ ಎಂಬ ಆಡ್ರಾಯ್ಡ್ ಆ್ಯಪ್ ತಯಾರಿಸಿದ್ದಾರೆ. ಕೊಡಗಿನ ವಿವಿಧ ಭಾಗದಲ್ಲಿ ಆನ್‌ಲೈನ್ ಮೂಲಕ ತರಕಾರಿ ಮುಂತಾದ ಸಾಮಗ್ರಿಗಳನ್ನು ತಲುಪಿಸುವ ಗುರಿ ಹೊಂದಿದ್ದರು. ತಾವು ಬೆಳೆದ ಭತ್ತದ ಅಕ್ಕಿಯನ್ನು ಆ್ಯಪ್ ಮೂಲಕ ಮಾರಾಟ ಮಾಡಲು ಚಿಂತನೆ ನಡೆಸಿದ್ದಾರೆ. ಭತ್ತ ಕಟಾವು ಮಾಡಿದ ಬಳಿಕ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಈ ಯುವಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.