ಭಟ್ಕಳ: ಶಿಕ್ಷಕ, ಲೇಖಕ, ಸಾಹಿತಿ ಪಿ.ಆರ್. ನಾಯ್ಕರ ಸರ್ವಾಧ್ಯಕ್ಷತೆಯಲ್ಲಿ ಮಲ್ಲಿಗೆ ಕಂಪಿನ ಭಟ್ಕಳದಲ್ಲಿ ಸೋಮವಾರ 4ನೇ ಸಾಹಿತ್ಯ ಸಮ್ಮೇಳನದ ಕಂಪು. ಒಂದೆಡೆ ಸಹ್ಯಾದ್ರಿ ಶಿಖರ, ಇನ್ನೊಂದೆಡೆ ಬೋರ್ಗರೆಯುವ ಅರಬ್ಬೀ ಸಮುದ್ರ; ಮತ್ತೊಂದೆಡೆ ಬಟಾಬಯಲುಸೀಮೆ, ಮಗದೊಂದೆಡೆ ತೆಂಗುಕಂಗು ಹಸಿರಿನಿಂದ ಕಂಗೊಳಿಸುವ ಮಲೆನಾಡ ಸಿರಿಯನ್ನು ಹೊಂದಿರುವ ಭಟ್ಟಾಕಳಂಕನ ನಾಡು. ರಾಣಿಚೆನ್ನಾಭೈರಾದೇವಿಯ ಆಡಳಿತದಲ್ಲಿದ್ದ ಭಟ್ಕಳ ಐತಿಹಾಸಿಕವಾಗಿ ಮಹತ್ವವುಳ್ಳ ನಾಡು. ನಾಮಧಾರಿ, ಮೊಗೇರ, ಗೊಂಡ, ನವಾಯತರಂಥಹ ಕಟ್ಟಾ ಸಂಪ್ರದಾಯವುಳ್ಳ ಜನಾಂಗದ ನಡುವೆ ಸಾಹಿತ್ಯದ ರಸದೌತಣವನ್ನು ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಮಾಡುತ್ತಿದೆ.

ಭಟ್ಕಳದಲ್ಲಿ ಸಾಹಿತ್ಯವನ್ನು, ಸಾಹಿತ್ಯಾಸಕ್ತರನ್ನು ಬೆಳೆಸಿ, ಸಾಹಿತ್ಯಿಕ ಚಟುವಟಿಕೆಗಳನ್ನು ಕಳೆದ ಹಲವು ವರ್ಷಗಳಿಂದ ಚಾಲ್ತಿಯಲ್ಲಿಟ್ಟವರ ಪೈಕಿ ಡಾ. ಸೈಯದ್ ಝಮೀರುಲ್ಲಾ ಷರೀಫ್, ಡಾ.ಆರ್.ವಿ.ಸರಾಫ್, ಇಂದಿನ ಸಮ್ಮೇಳನಾಧ್ಯಕ್ಷರಾದ ಪಿ.ಆರ್. ನಾಯ್ಕ, ದಿ. ಮಾಳ್ಕೋಡು ನಾರಾಯಣ ಹೆಗಡೆ ಪ್ರಮುಖರು. ಇವರಿಗೆ ಕೈಜೋಡಿಸಿ, ಸಾಹಿತಿಗಳಾಗಿ ಕೃತಿಗಳನ್ನು ರಚಿಸಿದವರ ಪೈಕಿ ಬಿ.ಆರ್.ಸಿ. ಸುರೇಶ ನಾಯ್ಕ, ಶ್ರೀಧರ ಶೇಟ್, ಮಾನಾಸುತ ಶಂಭು ಹೆಗಡೆ, ನೇತ್ರಾವತಿ ಆಚಾರ್ಯ, ಮಹಾಲಕ್ಷ್ಮಿ ಭಟ್, ಡಾ. ನಾರಾಯಣ ಮದ್ಯಸ್ಥ, ಉಮೇಶ ಮುಂಡಳ್ಳಿ ಮುಂತಾದವರು. ಕನ್ನಡ ಸಾಹಿತಿಗಳೊಂದಿಗೆ ಒಡನಾಟವಿಟ್ಟುಕೊಂಡು ತಮ್ಮದೇ ಆದ ಭಾಷೆ (ಉರ್ದು, ಹಿಂದಿ, ನವಾಯಿತಿ)ಗಳಲ್ಲಿ ಕಥೆ, ಕವನ, ಕೃತಿ ರಚನೆಯಲ್ಲಿ ಡಾ.ಕೆ.ಸಿ.ನಜೀರ್ ಅಹ್ಮದ್, ಡಾ.ಹನೀಫ್ ಶಬಾಬ್, ಸೈಯದ್ ಸಮೀಉಲ್ಲಾ ಬರ್ಮಾವರ್, ಹನೀಫ್ ಷಾ ಮುಂತಾದವರು ತೊಡಗಿಸಿಕೊಂಡಿದ್ದಾರೆ. ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಿಡಂಬಾರಿ, ದ್ವಿತೀಯ ಸಮ್ಮೆಳನಾಧ್ಯಕ್ಷತೆಯನ್ನು ನಾ.ಡಿಸೋಜ, ತೃತೀಯ ಸಮ್ಮೇಳನಾಧ್ಯಕ್ಷತೆಯನ್ನು ಡಾ. ಸೈಯದ್ ಝಮೀರುಲ್ಲಾ ಷರೀಫ್ ವಹಿಸಿದ್ದರು.

ಉದ್ಘಾಟನೆ: ಸೋಮವಾರ ಬೆಳಿಗ್ಗೆ 9 ಗಂಟೆಗೆ ಕನ್ನಡಾಂಬೆಗೆ ಗೌರವಾರ್ಪಣೆ, ಸಮ್ಮೇಳನಾಧ್ಯಕ್ಷರಿಗೆ ಮಾಲಾರ್ಪಣೆ ಮಾಡುವ ಮೂಲಕ ಶಾಸಕ ಜೆ.ಡಿ. ನಾಯ್ಕ, ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಹಾಯಕ ಕಮಿಷನರ್ ಡಾ. ಕೆ.ಎನ್. ಅನುರಾಧ ರಾಷ್ಟ್ರಧ್ವಜ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ರೋಹಿದಾಸ ನಾಯ್ಕ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ನ್ಯೂ ಇಂಗ್ಲಿಷ್ಸ್ಕೂಲ್ನ ಕಲಾವತಿ ಮತ್ತು ರಾಮನಾಥ ಶಾನುಭಾಗ್ ಸಭಾಗೃಹದಲ್ಲಿ ನಿರ್ಮಿಸಲಾದ ದಿ. ದುರ್ಗಪ್ಪ ಗುಡಿಗಾರ ವೇದಿಕೆಯಲ್ಲಿ ಶಾಸಕ ಜೆ.ಡಿ. ನಾಯ್ಕ ಬೆಳಿಗ್ಗೆ 10 ಗಂಟೆಗೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪುರಸಭೆ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಪುಸ್ತಕ ಮಳಿಗೆ, ಡಿವೈಎಸ್ಪಿ ಎಂ.ನಾರಾಯಣ ಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಸಾಹಿತಿಗಳಾದ ವಿಷ್ಣುನಾಯ್ಕ, ವಿ.ಗ. ನಾಯಕ ಉಪಸ್ಥಿತಿಯಲ್ಲಿ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ. ಸೈಯದ್ ಝಮೀರುಲ್ಲಾ ಷರೀಫ್, ಸಮ್ಮೇಳನಾದ್ಯಕ್ಷ ಪಿ.ಆರ್. ನಾಯ್ಕರಿಗೆ ಕನ್ನಡ ಬಾವುಟ ಹಸ್ತಾಂತರಿಸಲಿದ್ದಾರೆ. ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಡಾ.ಆರ್.ವಿ.ಸರಾಫ್ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಸಮ್ಮೇಳನಾಧ್ಯಕ್ಷ ಪಿ.ಆರ್. ನಾಯ್ಕ ಅಧ್ಯಕ್ಷೀಯ ಭಾಷಣ, ಪತ್ರಕರ್ತ ಮನೋಜ್ ಪಾಟೀಲ್ ಆಶಯ ಭಾಷಣ ಮಾಡಲಿದ್ದಾರೆ.

ಸಮ್ಮೆಳನದಲ್ಲಿ ಶ್ರೀಧರ ಶೇಟ್ರ ‘ಹಸಿವು ಸಾಯುವುದಿಲ್ಲ’ ಕೃತಿಯನ್ನು ಜಿ.ಎಸ್. ನಾಯ್ಕ; ಡಾ.ಆರ್ವಿ ಸರಾಫ್ರ ‘ಅಂದ ವ್ಯಕ್ತಿತ್ವಕ್ಕೆ ಚಂದ ಪಂಚಾಂಗ’ ಕೃತಿಯನ್ನು ಕೆ. ರಾಜಪ್ಪ; ಸಮ್ಮೆಳನಾಧ್ಯಕ್ಷ ಪಿ.ಆರ್.ನಾಯ್ಕರ ‘ತಣ್ಣೀರು’ ನಾಟಕ ಕೃತಿಯನ್ನು ದೇವಿದಾಸ ಮೊಗೇರ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 1.30ರಿಂದ ಸಮ್ಮೇಳನಾಧ್ಯಕ್ಷ ಪಿ.ಆರ್. ನಾಯ್ಕರ ಸಾಹಿತ್ಯ ಹಾಗೂ ಮಕ್ಕಳ ಕವಿಗೋಷ್ಠಿ ನಡೆಯಲಿದ್ದು, ಪ್ರೊ.ಡಿ.ವಿ. ಪ್ರಕಾಶ ಅಧ್ಯಕ್ಷತೆ ವಹಿಸಲಿದ್ದಾರೆ. ಯಲ್ಲಮ್ಮ ಮರಿಸ್ವಾಮಿ, ಡಾ.ಶ್ರೀಧರ ಉಪ್ಪಿನ ಗಣಪತಿ, ಡಾ.ನಾರಾಯಣ ಮಧ್ಯಸ್ಥ, ಡಾ. ಸುರೇಶ ಎನ್.ನಾಯ್ಕ, ಸುರೇಶ ತಾಂಡೇಲ, ಶ್ರೀಧರ ಶೇಟ್ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2.30ರಿಂದ ‘ಪ್ರಜಾವಾಣಿ’ ಉಪಸಂಪಾದಕ ಸಂದೀಪ ನಾಯಕ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ, 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ತಹಸೀಲ್ದಾರ ರಾಜು ಮೊಗವೀರ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಕ.ಸಾ.ಪ ಅಧ್ಯಕ್ಷ ರೋಹಿದಾಸ ನಾಯಕ ಆಶಯ ಭಾಷಣ ಮಾಡಲಿದ್ದಾರೆ. ಸಂಜೆ 5.30ರಿಂದ ಮನರಂಜನಾ ಕಾರ್ಯಕ್ರಮ ಮತ್ತು ಮಹಿಷಮರ್ಧಿನಿ ಯಕ್ಷಗಾನ ಕಲಾಸಂಘ ಉತ್ತರಕೊಪ್ಪ ಅವರಿಂದ ಹಾಸ್ಯಮಯ ಯಕ್ಷಗಾನ ಪ್ರದರ್ಶನ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.