ಶಿರಸಿ (ಉತ್ತರ ಕನ್ನಡ ಜಿಲ್ಲೆ): ಯಲ್ಲಾಪುರ ತಾಲ್ಲೂಕಿನ ತಾರಗಾರಿನ ಅಜ್ಜಿಗುಂಡಿ ಜಲಪಾತದಲ್ಲಿ ಪ್ರದರ್ಶನ ಕಂಡಿದ್ದ ‘ಅಜ್ಜಿಗುಂಡಿ ಡಾಟ್ ಕಾಮ್’ ನಾಟಕವು ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ.

ಇಲ್ಲಿನ ಮಿಯಾರ್ಡ್ಸ್ ಮೇದಿನಿ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಜ್ರಳ್ಳಿ ಗ್ರಾಮ ಪಂಚಾಯ್ತಿಯ ತಾರಗಾರ ಗ್ರಾಮದ ಕಲಾವಿದರು ಕಳೆದ ಜೂನ್‌ನಲ್ಲಿ ಜಲಪಾತದಲ್ಲಿ ಪ್ರದರ್ಶಿಸಿದ್ದ ನಾಟಕವನ್ನು ರಂಗಕರ್ಮಿ ಕೆ.ಆರ್. ಪ್ರಕಾಶ ನಿರ್ದೇಶಿಸಿದ್ದರು. ಜಲಪಾತದಲ್ಲಿ ಪ್ರದರ್ಶನ ಕಂಡಿದ್ದಕ್ಕೆ ಇದು ದಾಖಲೆಗೆ ಸೇರ್ಪಡೆಯಾಗಿದೆ.

ಅಡಿಕೆಮನೆಯ ಅಣ್ಣಯ್ಯ ಭಟ್ ನಾಟಕ ಪ್ರದರ್ಶನದ ದಾಖಲೀಕರಣ ಕಾರ್ಯ ನಡೆಸಿದ್ದರು, ಶಿರಸಿಯ ಮಾರಿಗುಡಿ ಕಾಲೇಜಿನ ಪ್ರಾಚಾರ್ಯ ಕೆ.ಎನ್. ಹೊಸ್ಮನಿ ಹಾಗೂ ಯಲ್ಲಾಪುರ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ದಾಕ್ಷಾಯಿಣಿ ಹೆಗಡೆ ಇದನ್ನು ಸಾಕ್ಷೀಕರಿಸಿದ್ದರು. ಈ ನಾಟಕ ಕೃತಿರೂಪದಲ್ಲಿ ಪ್ರಕಟಗೊಂಡಿದೆ ಎಂದು ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಹಾಗೂ ಕಾರ್ಯದರ್ಶಿ ಎಲ್.ಎಂ. ಹೆಗಡೆ ಗೋಳಿಕೊಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.