ಹೊಸಪೇಟೆ (ವಿಜಯನಗರ): ನಗರದ ಹೃದಯ ಭಾಗವಾದ ನ್ಯಾಯಾಲಯ ಸಂಕೀರ್ಣ ಸಮೀಪದ ಸಿದ್ಧಿಪ್ರಿಯೆ ಬೇಕರಿ ವೃತ್ತದಲ್ಲಿ ಶನಿವಾರ ಕೆಕೆಆರ್ಟಿಸಿ ಬಸ್ ಸ್ಕೂಟರ್ಗೆ ಡಿಕ್ಕಿ ಹೊಡೆದುದರಿಂದ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಗರದ ತಳವಾರಕೇರಿ ನಿವಾಸಿ ತಿಮ್ಮಪ್ಪ (55) ಮೃತರು. ಅಪಘಾತದ ದೃಶ್ಯ ಪಕ್ಕದ ಸಿದ್ಧಿಪ್ರಿಯ ಬೇಕರಿಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜನನಿಬಿಡ ಮತ್ತು ವಾಹನ ನಿಬಿಡ ಸ್ಥಳವಾಗಿರುವ ಈ ವೃತ್ತದಲ್ಲಿ ದಟ್ಟಣೆ ಸಮಯದಲ್ಲಿ ವಾಹನಗಳು ಸಾಕಷ್ಟು ಸಂಚರಿಸುತ್ತಿದ್ದು, ಸಂಚಾರ ನಿಯಂತ್ರಿಸಲು ಪೊಲೀಸರು ಇರುವುದಿಲ್ಲ, ಅಪಘಾತದಿಂದ ಇದೀಗ ಇಲ್ಲಿ ಒಂದು ಸಾವೇ ಸಂಭವಿಸಿದೆ, ಪೊಲೀಸರು ತಕ್ಷಣ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.