ಅರಸೀಕೆರೆ: ಹೋಬಳಿ ವ್ಯಾಪ್ತಿಯಲ್ಲಿ ಗೌರಿ ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಅರಸೀಕೆರೆ, ಉಚ್ಚಂಗಿದುರ್ಗ, ಕಂಚಿಕೆರೆ ಗ್ರಾಮ ಸೇರಿದಂತೆ ವಿವಿಧೆಡೆಗಳಲ್ಲಿ 176 ಗಣೇಶ ಮೂರ್ತಿಯನ್ನು ಪ್ರಮುಖ ಬೀದಿ, ದೇವಸ್ಥಾನ, ಶಾಲೆಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು.
ಮೊದಲ ದಿನವಾದ ಶನಿವಾರ 3 ಗಣೇಶ ಮೂರ್ತಿಯನ್ನು, ಮೂರನೇ ದಿನವಾದ ಸೋಮವಾರ 117 ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಐದನೇ ದಿನಕ್ಕೆ 46 ಹಾಗೂ 9ನೇ ದಿನಕ್ಕೆ ವಿಸರ್ಜನೆ ಮಾಡಲಾಗುವುದು.
ನಾಗತಿಕಟ್ಟೆ ತಾಂಡದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆದವು. ಮಹಿಳೆಯರು, ಯುವಕರು ಕುಣಿದು ಕುಪ್ಪಳಿಸಿದರು. ಪರಸ್ಪರ ಬಣ್ಣ ಎರಚಿ ಸಂಭ್ರಮ ಪಟ್ಟರು.