ಭಾನುವಾರ, ಮೇ 22, 2022
25 °C

ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಶಾಸಕ ಎಸ್.ಭೀಮಾನಾಯ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಕೋವಿಡ್ ನಿಯಯಮಾವಳಿ ಉಲ್ಲಂಘಿಸಿ ಶಾಸಕ ಎಸ್.ಭೀಮಾನಾಯ್ಕ ಸೋಮವಾರ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟಿಸಿದರು.

ತಾಲ್ಲೂಕು ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಸ್ಥಳೀಯ ಖಾಸಗಿ ವೈದ್ಯರು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಕೆಪಿಸಿಸಿ ಸದಸ್ಯ ಕೆ.ಶಿವಮೂರ್ತಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸೇರಿದ್ದರು. ಅಂತರ ಪಾಲಿಸಿರಲಿಲ್ಲ.

ನಂತರ ಮಾತನಾಡಿದ ಶಾಸಕರು, ‘ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಂತೆ ವೇದಿಕೆ ಕಾರ್ಯಕ್ರಮ ಏರ್ಪಡಿಸಿಲ್ಲ’ ಎಂದು ಸಮರ್ಥಿಸಿಕೊಂಡರು

ವಸತಿ ಶಾಲೆ– 40 ವಿದ್ಯಾರ್ಥಿನಿಯರಿಗೆ ಸೋಂಕು: ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಇಲ್ಲಿಯ ರಾಣಿ ಚನ್ನಮ್ಮ ಸ್ಮಾರಕ ಬಾಲಕಿಯರ ವಸತಿ ಸೈನಿಕ ಶಾಲೆಯ 40 ವಿದ್ಯಾರ್ಥಿನಿಯರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಎಸ್. ಎಸ್. ಸಿದ್ದಣ್ಣವರ ಸೋಮವಾರ ತಿಳಿಸಿದರು. ಇದರೊಂದಿಗೆ 13 ಸಿಬ್ಬಂದಿ ಸೇರಿ ವಸತಿ ಶಾಲೆಯಲ್ಲಿಯೇ 234 ವಿದ್ಯಾರ್ಥಿನಿಯರಿಗೆ ಕೋವಿಡ್ ದೃಢಪಟ್ಟಂತಾಗಿದೆ.

ಬಜರಂಗ ದಳದ ಕಾರ್ಯಕರ್ತರ ವಿರುದ್ಧ ಪ್ರಕರಣ

ಹೊಸಪೇಟೆ (ವಿಜಯನಗರ): ಕೋವಿಡ್‌ ನಿಯಮ ಉಲ್ಲಂಘಿಸಿ ಶ್ರೀಕೃಷ್ಣದೇವರಾಯ ಜಯಂತಿ ಆಚರಿಸಿದ ಆರೋಪದಡಿ ರಾಷ್ಟ್ರ ರಕ್ಷಣಾ ಪಡೆ, ಬಜರಂಗ ದಳದ ಹತ್ತು ಜನರ ವಿರುದ್ಧ ಸೋಮವಾರ ಹಂಪಿ ಪ್ರವಾಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಂತರ ಪಾಲಿಸಿರಲಿಲ್ಲ. ಮುಖಗವಸು ಸೂಕ್ತ ರೀತಿ ಧರಿಸದ ಕಾರಣ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ.ತಿಳಿಸಿದ್ದಾರೆ.

ಕಾರ್ಯಕರ್ತರು ಆನೆಗೊಂದಿಯಲ್ಲಿ ಕೃಷ್ಣದೇವರಾಯನ ಜಯಂತಿ ಆಚರಿಸಿದ ನಂತರ ಹಂಪಿಗೆ ಬಂದು ಪೂಜೆ ಸಲ್ಲಿಸಿದ್ದರು. ವಿಜಯನಗರ ರಾಜ ವಂಶಸ್ಥ ಕೃಷ್ಣದೇವರಾಯ ಅವರನ್ನು ಅಲ್ಲಿ ಆದರೆ, ಆ ಸಂಬಂಧ ಪ್ರಕರಣ ದಾಖಲಾಗಿಲ್ಲ.

ದೂರದಿಂದಲೇ ಯಲ್ಲಮ್ಮನಿಗೆ ನಮಿಸಿದ ಭಕ್ತರು ಉಗರಗೋಳ (ಬೆಳಗಾವಿ ಜಿಲ್ಲೆ): ಕೋವಿಡ್ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಆದರೂ ಸೋಮವಾರ ‘ಬನದ ಹುಣ್ಣಿಮೆ’ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ದೂರದಿಂದಲೇ ದೇವಿಗೆ ನಮನ ಸಲ್ಲಿಸಿದರು.

ಉಗರಗೋಳ, ಹಿರೇಕುಂಬಿ, ಚಿಕ್ಕುಂಬಿ, ಚುಳಕಿ ಗ್ರಾಮಗಳಲ್ಲಿ ಬನದ ಹುಣ್ಣಿಮೆ ಆಚರಿಸಿ ಭಕ್ತಿ ಸಮರ್ಪಿಸಿದರು. ಗುಡ್ಡಕ್ಕೆ ಪ್ರವೇಶ ನಿಷೇಧಿಸಿದರೂ ಭಕ್ತರ ಪ್ರವಾಹ ನಿಂತಿರಲಿಲ್ಲ. ಭಾನುವಾರ ಸಂಜೆಯಿಂದಲೇ ಭಕ್ತರು ಬಂದು ಹೊರವಲಯದಲ್ಲಿ ತಂಗಿದ್ದರು.ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ, ಜನರಸಂಚಾರ
ನಿಷೇಧಿಸಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು