ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ₹19.27 ಕೋಟಿ ಮಧ್ಯಂತರ ವಿಮೆ ಸಂದಾಯ

Published 19 ನವೆಂಬರ್ 2023, 5:32 IST
Last Updated 19 ನವೆಂಬರ್ 2023, 5:32 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬರಗಾಲದಿಂದ ತತ್ತರಿಸಿರುವ ವಿಜಯನಗರ ಜಿಲ್ಲೆಯ ರೈತರಿಗೆ ಕೊನೆಗೂ ಒಂದು ಸಂತಸದ ಸುದ್ದಿ ಲಭಿಸಿದ್ದು, ಬೆಳೆ ವಿಮೆ ಮಾಡಿಸಿದ 26,254 ಕೃಷಿಕರಿಗೆ ಮುಂಗಾರು ಹಂಗಾಮಿನ ಮಧ್ಯಂತರ ಬೆಳೆ ಪರಿಹಾರವಾಗಿ ₹19.27 ಕೋಟಿ ವಿಮಾ ಪರಿಹಾರ ಹಣ ಸಂದಾಯವಾಗಿದೆ.

ಮುಂಗಾರು ಹಂಗಾಮಿನ ಬೆಳೆ ನಷ್ಟದ ಸಮೀಕ್ಷೆಯನ್ನು ಕಳೆದ ತಿಂಗಳು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಹಾಗೂ ವಿಮಾ ಕಂಪನಿಗಳು ಜಂಟಿಯಾಗಿ ನಡೆಸಿದ್ದವು. ಅದರ ವರದಿಯನ್ನು ಆಧರಿಸಿ ಇದೀಗ ಮಧ್ಯಂತರ ವಿಮಾ ಪರಿಹಾರ ದೊರೆತಿದೆ. ತಾಲ್ಲೂಕುವಾರು ಮಧ್ಯಂತರ ವಿಮಾ ಪರಿಹಾರದ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಹರ‍ಪನಹಳ್ಳಿಯಲ್ಲಿ ಒಬ್ಬ ರೈತರಿಗ ಗರಿಷ್ಠ ₹1.48 ಲಕ್ಷದಷ್ಟು ಹಣ ಬಂದಿದ್ದರೆ, ಹೂವಿನಹಡಗಲಿಯಲ್ಲಿ ಇನ್ನೊಬ್ಬ ರೈತರಿಗೆ ₹1.14 ಲಕ್ಷದಷ್ಟು ಪರಿಹಾರ ದೊರೆತಿದೆ. ಹರಪನಹಳ್ಳಿಯ ಈ ರೈತ ತಮ್ಮ 49 ಎಕರೆ ಕೃಷಿ ಭೂಮಿಗೆ ವಿಮೆ ಮಾಡಿಸಿದ್ದರು.

'ವಿಮೆ ಮಾಡಿಸುವ ವಿಚಾರದಲ್ಲಿ ರೈತರು ಹಿಂದೇಟು ಹಾಕಬಾರದು. ಬರಗಾಲ, ಪ್ರವಾಹದಂತಹ ಪರಿಸ್ಥಿತಿಗಳಲ್ಲಿ ಅದು ರೈತರ ಕೈಯನ್ನು ನಿಜವಾಗಿಯೂ ಹಿಡಿಯುತ್ತದೆ. ಅದರ ಹೊರತಾಗಿಯೂ ಬೆಳೆ ತೆನೆಕಟ್ಟುವ ಹಂತದಿಂದ ಕಟಾವು ನಂತರದ 15 ದಿನಗಳ ವರೆಗೆ ಒಟ್ಟು ಐದು ಸಂದರ್ಭಗಳಲ್ಲಿ ವಿಮೆ ಪರಿಹಾರ ಪಡೆಯುವ ಅವಕಾಶ ಇದೆ. ಮುಂಗಾರು ಹಂಗಾಮಿಗೆ ಬಂದಿರುವ ಮಧ್ಯಂತರ ಪರಿಹಾರ ಇದು, ಪೂರ್ಣ ಪ್ರಮಾಣದ ಪರಿಹಾರ ಬಂದಾಗ ಆಗಿರುವ ಬೆಳೆ ನಷ್ಟದ ಶೇ 70ರಷ್ಟು ಪರಿಹಾರ ವಿಮೆ ರೂಪದಲ್ಲಿ ರೈತರಿಗೆ ಸಿಗಲಿದೆ. ಇದು ನಿಜಕ್ಕೂ ಈ ಸಂದಿಗ್ಧ ಸ್ಥಿತಿಯಲ್ಲಿ ಉತ್ತಮ ಪರಿಹಾರವೇ ಆಗಿದೆ. ಜಿಲ್ಲೆಯಲ್ಲಿ ಬಜಾಜ್‌ ಅಲಯನ್ಸ್‌ ವಿಮಾ ಕಂಪನಿ ಕೃಷಿ ವಿಮೆ ಮಾಡುವ ಹೊಣೆ ಹೊತ್ತುಕೊಂಡಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳೆ ವಿಮೆ ಮಾಡಿಸಿ ಪರಿಹಾರದ ಪ್ರಮಾಣ ಗಮನಿಸಿದರೆ ವಿಮಾ ಕಂತು ಹೆಚ್ಚೇನೂ ಅಲ್ಲ ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು.
ಶರಣಪ್ಪ ಮುದ್ಗಲ್‌, ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT