ಬುಧವಾರ, ಜೂನ್ 23, 2021
22 °C

ಇ-ವಾಣಿಜ್ಯ ಕಾರ್ಮಿಕರಿಗೆ ಪ್ಯಾಕೇಜ್ ಘೋಷಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ(ವಿಜಯನಗರ): ಇ-ವಾಣಿಜ್ಯ ಆಹಾರ ಪೂರೈಕೆದಾರರಿಗೆ ಲಾಕ್‌ಡೌನ್ ಸಮಯದಲ್ಲಿ ಸರ್ಕಾರದ ವತಿಯಿಂದ ಅಗತ್ಯ ಪ್ಯಾಕೇಜ್ ಒದಗಿಸಬೇಕು ಎಂದು ಯುನೈಟೆಡ್ ಫುಡ್ ಡೆಲಿವರಿ ಪಾರ್ಟನರ್ಸ್ ಸಂಘಟನೆ ಒತ್ತಾಯಿಸಿದೆ.

ಕುಟುಂಬ ನಿರ್ವಹಣೆಗೆ ಈ ದುಡಿಮೆಯ ಮೇಲೆ ಅವಲಂಬಿತರಾದವರು ಹೆಚ್ಚು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ಈ ಹಿಂದೆಯೂ ತರಲಾಗಿದೆ. ನಮ್ಮ ಯೂನಿಯನ್ ವತಿಯಿಂದ ಕಳೆದ ಬಾರಿ ದಿಢೀರನೆ ಲಾಕ್‌ಡೌನ್ ವಿಧಿಸಿದಾಗಲೂ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದೆವು. ಆದರೆ ನಮ್ಮ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಯೂನಿಯನ್‌ ಉಪಾಧ್ಯಕ್ಷ ಯರಿಸ್ವಾಮಿ ಮುಂಡರಗಿ ಆರೋಪಿಸಿದ್ದಾರೆ.

ಈ ಬಾರಿಯ ಲಾಕ್ ಡೌನ್ ನಲ್ಲೂ ಕೆಲ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ಸಾಕಷ್ಟು ಜನ ಕೆಲಸ ನಿರ್ವಹಿಸುತ್ತಿದ್ದಾರೆ. ವ್ಯಾಪಾರದ ಕುಂಠಿತ ಜೊತೆಗೆ ಪೆಟ್ರೋಲ್ ಬೆಲೆ ಏರಿದೆ. ಇವರು ಹೆಚ್ಚಿನ ಜನರನ್ನು ಭೇಟಿ ಮಾಡುವುದರಿಂದ ಹೈ-ರಿಸ್ಕ್ ನಲ್ಲಿ ಕೆಲಸ ನಿರ್ವಹಿಸುತ್ತಾರೆ. ಹೀಗಾಗಿ ಇವರ ಕುಟುಂಬಸ್ಥರು ಅಪಾಯದ ಅಂಚಿನಲ್ಲಿ ಇರುತ್ತಾರೆ. ಸಾಂಕ್ರಾಮಿಕ ರೋಗದ ವಿಷಮ ಪರಿಸ್ಥಿತಿಯಲ್ಲಿ ಕಾರ್ಮಿಕರು ಸೇವೆಯನ್ನು ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕೂಡಲೇ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳ ಪ್ಯಾಕೇಜ್ ಘೋಷಿಸಬೇಕೆಂದು ಯುನಿಯನ್ ಉಪಾಧ್ಯಕ್ಷ ಯರಿಸ್ವಾಮಿ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು