ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಪಾಪಿನಾಯಕನಹಳ್ಳಿ ಅಂಡರ್‌ಪಾಸ್‌ ದುರಸ್ತಿಗೆ ಆಗ್ರಹ

Last Updated 4 ಫೆಬ್ರುವರಿ 2022, 13:05 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ರೈಲ್ವೆ ಅಂಡರ್‌ಪಾಸ್‌ ಮರು ದುರಸ್ತಿಗೊಳಿಸಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

ರೈತರು, ವಿದ್ಯಾರ್ಥಿಗಳು, ಗಣಿ ಕಾರ್ಮಿಕರು, ಅಂಡರ್‌ಪಾಸ್‌ ಮೂಲಕ ಓಡಾಡುತ್ತಿದ್ದರು. ರೈಲ್ವೆ ಯಾರ್ಡ್‌ ವಿಸ್ತರಣೆ, ವಿದ್ಯುದ್ದೀಕರಣ ಸೇರಿದಂತೆ ಇತರೆ ಕಾಮಗಾರಿಗಳ ಸಂದರ್ಭದಲ್ಲಿ ರೈಲ್ವೆಯವರು ಅದನ್ನು ಮುಚ್ಚಿದ್ದಾರೆ. ಇದರಿಂದ ಸ್ಥಳೀಯರಿಗೆ ಬಹಳ ಸಮಸ್ಯೆ ಉಂಟಾಗುತ್ತಿದೆ ಎಂದು ಶುಕ್ರವಾರ ನಗರದಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಗೋಳು ತೋಡಿಕೊಂಡಿದ್ದಾರೆ.

ಈ ಮಾರ್ಗದಲ್ಲಿ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳ ಸಂಚಾರ ಹೆಚ್ಚಿದೆ. ಹಳಿ ದಾಟಿಕೊಂಡು ಹೋಗುವಾಗ ರೈತರ ಜಾನುವಾರುಗಳು ಮೃತಪಡುತ್ತಿವೆ. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಇದೆ. ತುರ್ತು ಕೆಲಸಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಂಡರ್‌ಪಾಸ್‌ ಶೀಘ್ರ ದುರಸ್ತಿಗೊಳಿಸಿ ಮೊದಲಿನಂತೆ ಓಡಾಟಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್, ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಕೆ.ಎಚ್.ಮಹಾಂತೇಶ್, ಮಹೇಶ್ ಕುಡಿತಿನಿ, ಪ್ರಭಾಕರ್, ವಿಶ್ವನಾಥ್ ಕೌತಾಳ್, ಶಿವಪುತ್ರಪ್ಪ, ಕೆ.ಸೋಮರೆಡ್ಡಿ, ಎಚ್.ಚಂದಾಸಾಬ್, ರಾಜಶೇಖರ್, ಬಿ.ಹನುಮಂತಪ್ಪ, ಎಚ್.ವೀರೇಶ್, ಎಚ್.ಅಂಜಿನಪ್ಪ, ಕೆ.ಗಂಗಾಧರ, ವೆಂಕಟೇಶ್, ಜಂಬಪ್ಪ, ದೊಡ್ಡರಾಮಪ್ಪ, ಬಸಪ್ಪ, ಭೀಮಪ್ಪ, ಹನುಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT