ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಗೆ ರೈಲು ವಿಸ್ತರಿಸಲು ಆಗ್ರಹ

Last Updated 18 ಮಾರ್ಚ್ 2021, 11:55 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮುಂಬೆ–ಗದಗ, ಸೊಲ್ಲಾಪುರ–ಗದಗ ರೈಲುಗಳನ್ನು ಹೊಸಪೇಟೆ, ಬಳ್ಳಾರಿ ವರೆಗೆ ವಿಸ್ತರಿಸಬೇಕೆಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಆಗ್ರಹಿಸಿದೆ.

ಬುಧವಾರ ರಾತ್ರಿ ನಗರಕ್ಕೆ ಭೇಟಿ ನೀಡಿ ಸುವರ್ಣರಥ ರೈಲಿನ ಪರಿಶೀಲನೆ ನಡೆಸಿದ ‌ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ್‍ಕುಮಾರ್ ಸಿಂಗ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

‘ಹಲವು ವರ್ಷಗಳಿಂದ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಿಂದ ಬಾಗಲಕೋಟೆ, ವಿಜಯಪುರ, ಸೊಲ್ಲಾಪುರ ಹಾಗೂ ಮುಂಬೈ ನಗರಗಳಿಗೆ ನೇರ ರೈಲಿನ ಸಂಪರ್ಕ ಇಲ್ಲ. ಪ್ರಸ್ತುತ ಸಂಚರಿಸುವ ಮುಂಬೈ-ಗದಗ ಹಾಗೂ ಸೊಲ್ಲಾಪುರ-ಗದಗ ರೈಲುಗಳನ್ನು ಹೊಸಪೇಟೆ, ಬಳ್ಳಾರಿವರೆಗೆ ವಿಸ್ತರಿಸಿದರೆ ಮುಂಬೈ ನಗರಕ್ಕೆ ನೇರ ಸಂಪರ್ಕ ಲಭಿಸಿದಂತಾಗುತ್ತದೆ. ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಳಖೇಡ್, ಸ್ಥಳೀಯ ನಿಲ್ದಾಣ ಅಧಿಕಾರಿ ಉಮೇಶ್, ಸಮಿತಿಯ ವೈ. ಯಮುನೇಶ್‌, ಕುಡುತಿನಿ ಮಹೇಶ್, ದೀಪಕ್‍ಉ ಳ್ಳಿ, ಕಲ್ಲೇಶ್ ಜೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT