ಕೂಡ್ಲಿಗಿ: ವಿಷ ಜಂತು ಕಚ್ಚಿ ರೈತ ರಾಜಕುಮಾರ್ (38) ಮೃತರಾದ ಘಟನೆ ತಾಲ್ಲೂಕಿನಲ್ಲಿ ಎ. ದಿಬ್ಬದಹಳ್ಳಿಯಲ್ಲಿ ಗುರುವಾರ ನಡೆದಿದೆ.

ಅವರು ಎಮ್ಮೆಗೆ ಮೇವು ತರಲು ಕಣದಲ್ಲಿನ ಬಣವೆಯಲ್ಲಿ ಮೆಕ್ಕೆ ಜೋಳದ ಸೊಪ್ಪೆ ಕೀಳುವಾಗ ವಿಷ ಜಂತು ಕೈಗೆ ಕಚ್ಚಿದೆ. ತಕ್ಷಣ ಕೂಡ್ಲಿಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತೆಗೆ ಕರೆದುಕೊಂಡು ಹೋಗುವಾಗ ಅವರು ಮಾರ್ಗಮಧ್ಯ ಮೃತಪಟ್ಟಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ. ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.