ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ದುಗ್ಗಾವತಿ ಗ್ರಾಮದ ತೋಟವೊಂದರ ಬೇಲಿಗೆ ಅವೈಜ್ಞಾನಿಕವಾಗಿ ಸುತ್ತಲಾಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮತ್ತು ಮಗ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

ದುಗ್ಗಾವತಿಯ ರಮೇಶ್ (40) ಮತ್ತು ಚಂದ್ರಪ್ಪ (17) ಮೃತಪಟ್ಟವರು. ಶಾಮನೂರು ಬಿಸಲೆರಿ ಕಾರ್ಖಾನೆಯತ್ತ ವಿದ್ಯುತ್ ಕಂಬದ ತಂತಿಗಳು ಹಾದು ಹೋಗಿವೆ.

ಒಂದು ಕಂಬದ ತಂತಿಗಳನ್ನು ತುಂಡರಿಸಿ (ಡೆಡ್ ಲೈನ್) ಬೇಲಿ ಮೇಲೆ ಅವೈಜ್ಞಾನಿಕ ಸುತ್ತಲಾಗಿತ್ತು. ಆದರೆ ಕಂಬದ ಮೇಲ್ಗಡೆಯ ವಿದ್ಯುತ್ ಸಂಪರ್ಕ ತಪ್ಪಿಸಿರಲಿಲ್ಲ. ಇದರಿಂದ ವಿದ್ಯುತ್ ಪ್ರವಹಿಸಿದೆ. ಇದೇ ವೇಳೆ ಅದೇ ಮಾರ್ಗದಲ್ಲಿ ಬಂದಿದ್ದ ರಮೇಶ್ ಅವರಿಗೆ ತಂತಿ ಸ್ಪರ್ಶಿಸಿದೆ. ನಂತರ ಮಗನಿಗೂ ಸ್ಪರ್ಶಿಸಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.