ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ಗಣೇಶ ಉತ್ಸವ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

Published : 6 ಸೆಪ್ಟೆಂಬರ್ 2024, 14:23 IST
Last Updated : 6 ಸೆಪ್ಟೆಂಬರ್ 2024, 14:23 IST
ಫಾಲೋ ಮಾಡಿ
Comments

ಹೊಸಪೇಟೆ(ವಿಜಯನಗರ): ಗಣೇಶ ಹಬ್ಬದ ಮುನ್ನಾದಿನ ಶುಕ್ರವಾರ ನಗರದ ವಿವಿಧ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ನಗರದ ಗಾಂಧಿ ಚೌಕದ ಬಳಿಯ ಹೂವಿನ ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಗ್ರಾಹಕರು ವಿವಿಧ ನಮೂನೆಯ ಗಣೇಶ ವಿಗ್ರಹಗಳ ಖರೀದಿ ಸೇರಿದಂತೆ ಹಣ್ಣು, ಹೂವು, ಬಾಳೆ ಕಂಬ, ಮಾವಿನ ಸೊಪ್ಪು, ಕರಿಕೆ, ಪತ್ರಿ, ಅಲಂಕಾರಿಕಾ ಸಾಮಾಗ್ರಿಗಳು ಸೇರಿದಂತೆ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು.

ಮಾರುಕಟ್ಟೆಯಲ್ಲಿ ದಿನವಿಡೀ ಖರೀದಿ ಭರಾಟೆ ಕಂಡುಬಂತು. ಹೂವುಹಣ್ಣು ಸೇರಿದಂತೆ ವಿವಿಧ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದರೂ ಸಹ ಮಹಿಳೆಯರು, ಯುವತಿಯರು ಸೇರಿದಂತೆ ಗ್ರಾಹಕರು ಯಾವುದೇ ಚೌಕಾಸಿ ಇಲ್ಲದೆ ಖರೀಯಲ್ಲಿ ತೊಡಗಿಕೊಂಡಿದ್ದರು.

ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲು ವಿವಿಧ ಆಕಾರದ ಪುಟ್ಟ ಮೂರ್ತಿಗಳನ್ನು ಖರೀದಿಸಿದರೇ, ಯುವಕರ ಗುಂಪು ವಿವಿಧೆಡೆ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ವಿವಿಧ ನಮೂನೆಯ ಹಾಗೂ ವಿವಿಧ ರೀತಿಯ ಎತ್ತರದ ಗಣೇಶ ಮೂರ್ತಿಗಳನ್ನು ಖರೀದಿಸಿ ವಾಹನಗಳಲ್ಲಿ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.

ಹಬ್ಬದ ಹಿನ್ನೆಲೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಮಲ್ಲಿಗೆ, ಕನಕಾಂಬರಿ ಹೂ ಒಂದು ಮೊಳಕ್ಕೆ ₹60 ಇದ್ದರೆ, ಚೆಂಡು ಹೂವಿನ ಹಾರವು ಒಂದು ಮಾರಿಗೆ ₹80 ವರೆಗೆ ಇದ್ದುದು ಕಂಡು ಬಂದಿತು.

ಸೇಬು ಹಣ್ಣಿನ ಬೆಲೆ ಕೆ.ಜಿ.ಗೆ ₹180 ಇದ್ದರೆ, ಸೀತಾಫಲ ₹100, ಕಪ್ಪುದ್ರಾಕ್ಷಿ ಬೆಲೆ ₹200, ಹಸಿರು ದ್ರಾಕ್ಷಿಯ ಬೆಲೆ ₹200 ಹಾಗೂ ಸಪೋಟಾ ₹80, ದಾಳೆಂಬೆ ₹200, ಮೊಸಂಬಿ ಹಾಗೂ ಕಿತ್ತಳೆ ಬೆಲೆ ಕೆ.ಜಿ.ಗೆ ₹100 ದರವಿತ್ತು.

ಹೊಸಪೇಟೆಯಲ್ಲಿ ಶುಕ್ರವಾರ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ತರಹೇವಾರಿ ಹಣ್ಣುಗಳನ್ನು ಮಾರಾಟಕ್ಕಾಗಿ ಗುಂಪಿ ಹಾಕಿದ್ದರು
ಹೊಸಪೇಟೆಯಲ್ಲಿ ಶುಕ್ರವಾರ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ತರಹೇವಾರಿ ಹಣ್ಣುಗಳನ್ನು ಮಾರಾಟಕ್ಕಾಗಿ ಗುಂಪಿ ಹಾಕಿದ್ದರು
ಹೊಸಪೇಟೆಯಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಮಾರಾಟ ಭರಾಟೆ ಜೋರಾಗಿತ್ತು
ಹೊಸಪೇಟೆಯಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಮಾರಾಟ ಭರಾಟೆ ಜೋರಾಗಿತ್ತು
ಹೊಸಪೇಟೆಯಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಮಹಿಳೆಯರು ಮಾವಿನ ಎಲೆ ಖರೀದಿಯಲ್ಲಿ ನಿರತರಾಗಿದ್ದು ಕಂಡು ಬಂತು
ಹೊಸಪೇಟೆಯಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಮಹಿಳೆಯರು ಮಾವಿನ ಎಲೆ ಖರೀದಿಯಲ್ಲಿ ನಿರತರಾಗಿದ್ದು ಕಂಡು ಬಂತು
ಹೊಸಪೇಟೆಯಲ್ಲಿ ಶುಕ್ರವಾರ ಆಂದ್ರಪ್ರದೇಶ ಕರ್ನೂಲ್ ಜಿಲ್ಲೆಯ ಆದೋನಿಯಿಂದ ಬಂದ ಯುವಕರ ತಂಡ ಶುಕ್ರವಾರ ಗಣೇಶ ಮೂರ್ತಿಗಳನ್ನು ಖರೀದಿಸಿ ವಾಹನದಲ್ಲಿ ಕೊಂಡೊಯ್ದರು.
ಹೊಸಪೇಟೆಯಲ್ಲಿ ಶುಕ್ರವಾರ ಆಂದ್ರಪ್ರದೇಶ ಕರ್ನೂಲ್ ಜಿಲ್ಲೆಯ ಆದೋನಿಯಿಂದ ಬಂದ ಯುವಕರ ತಂಡ ಶುಕ್ರವಾರ ಗಣೇಶ ಮೂರ್ತಿಗಳನ್ನು ಖರೀದಿಸಿ ವಾಹನದಲ್ಲಿ ಕೊಂಡೊಯ್ದರು.
ಹೊಸಪೇಟೆಯಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಮಹಿಳೆಯರು ಚೆಂಡು ಹೂವಿನ ಹಾರ ಖರೀದಿಯಲ್ಲಿ ನಿರತರಾಗಿದ್ದು ಕಂಡು ಬಂದಿತು.
ಹೊಸಪೇಟೆಯಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಮಹಿಳೆಯರು ಚೆಂಡು ಹೂವಿನ ಹಾರ ಖರೀದಿಯಲ್ಲಿ ನಿರತರಾಗಿದ್ದು ಕಂಡು ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT