ಹೊಸಪೇಟೆ (ವಿಜಯನಗರ): ಹಳೆಯ ಕಟ್ಟಡಗಳಲ್ಲಿ ನೆಲೆಸುವ ಅಪರೂಪದ ಕಂದು ಬಂಡೆ ಸಿಳ್ಳಾರ ಪಕ್ಷಿ (ಬ್ರೌನ್ ರಾಕ್ ಚಾಟ್) ಹಂಪಿಯ ಅಚ್ಯುತರಾಯ ದೇಗುಲ ಪ್ರದೇಶದಲ್ಲಿ ಕಾಣಿಸಿದೆ.

ಉತ್ತರಭಾರತ ಮತ್ತು ಮಧ್ಯಭಾರತದಲ್ಲಿ ಹೆಚ್ಚಾಗಿ ಕಾಣಿಸುವ ಸಿಳ್ಳಾರ ಹಕ್ಕಿಯ ಬಗ್ಗೆ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯಸ್ವಾಮಿ ಮಳಿಮಠ ಆಸಕ್ತಿ ಹೊಂದಿದ್ದರು. ಅವರ ಮಾರ್ಗದರ್ಶನದಲ್ಲಿ ಸುತ್ತಾಟದಲ್ಲಿದ್ದ ಕೋಲ್ಕತ್ತ ತಂಡದ ಸಬ್ಯಸಾಚಿ ರಾಯ್ ಅವರ ಕ್ಯಾಮೆರಾಗೆ ಈಗ ಸೆರೆಸಿಕ್ಕಿದೆ.

ಈ ಹಕ್ಕಿ ರಾಜ್ಯದಲ್ಲಿ ಈವರೆಗೆ ಎರಡು ಬಾರಿ ಕಾಣಿಸಿದೆ. ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೇವಾಲಯದ ಬಳಿ ಕಂಡಿತ್ತು. ಇದೀಗ ಅದು ಹಂಪಿಯಲ್ಲೇ ನೆಲೆಸಿರುವುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.