ಹರಪನಹಳ್ಳಿ: ತಾಲ್ಲೂಕಿನ ನೀಲಗುಂದ ಗುಡ್ಡದ ಸಂಸ್ಥಾನ ಜಂಗಮಪೀಠದಲ್ಲಿ ಶನಿವಾರ ಜಂಗಮ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಸಂಭ್ರಮದಿಂದ ಜರುಗಿದವು.

ಸಾನ್ನಿಧ್ಯ ವಹಿಸಿದ್ದ ಲಿಂಗನಾಯ್ಕನಹಳ್ಳಿ ಜಂಗಮಕ್ಷೇತ್ರದ ಹಾಲವರ್ತಿ ಚನ್ನವೀರ ಶಿವಯೋಗಿ ಸ್ವಾಮೀಜಿ, ‘ನವ ಜೀವನಕ್ಕೆ ಕಾಲಿರಿಸಿದ ದಂಪತಿ ಆದರ್ಶ ದಾಂಪತ್ಯ ತಮ್ಮದಾಗಿಸಿಕೊಳ್ಳಬೇಕು. ಮನೆಯಲ್ಲಿ ಹಿರಿಯರನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ. ದುಶ್ಚಟಗಳಿಂದ ದೂರವಿರಿ’ ಎಂದು ಸಲಹೆ ನೀಡಿದರು.

ಹೂವಿನಹಡಗಲಿ ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ‘ಸಾಮೂಹಿಕ ವಿವಾಹಗಳು ಬಡವರು, ಮಧ್ಯಮ ವರ್ಗದ ಜನತೆಗೆ ಆರ್ಥಿಕ ಹೊರೆ ತಪ್ಪಿಸುತ್ತವೆ. ಅಷ್ಟೇ ಅಲ್ಲದೇ ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತವೆ. ಮಠಮಾನ್ಯಗಳು ಮಾಡುವ ಸಾಮೂಹಿಕ ವಿವಾಹಗಳು ಬಡವರ ಪಾಲಿನ ವರದಾನ ಆಗಿವೆ’ ಎಂದರು.

ಚನ್ನಬಸಪ್ಪ ಕಾಳಮ್ಮ ಮರುಳಪ್ಪನವರ್ ಮಗನಾದ ಹನುಮಂತ ಕುಟುಂಬದವರಿಂದ ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿ ಅವರ 71ನೇ ವರ್ಷದ ಜನ್ಮ ದಿನದ ನಿಮಿತ್ತ ಸ್ವಾಮೀಜಿ ಅವರಿಗೆ ತುಲಾಭಾರ ಕಾರ್ಯಕ್ರಮ ನೆರವೇರಿಸಿದರು. 18 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಎಂ.ಪಿ.ವೀಣಾ ಮಹಾಂತೇಶ್, ವಿ.ಸಣ್ಣಅಜ್ಜಯ್ಯ, ಆರುಂಡಿ ನಾಗರಾಜ್ ಮಾತನಾಡಿದರು. ಕಳಸಾಪುರದ ಮಾನಪ್ಪಜ್ಜ, ಅರಸೀಕೆರೆ ಕೊಟ್ರೇಶ ಶರಣರು, ಎಚ್.ಎಂ.ಲಲಿತಮ್ಮ, ನೀಲಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಅನ್ನಪೂರ್ಣಮ್ಮ, ಮುತ್ತಿಗಿ ವಾಗೀಶ, ಕೆ.ಎಂ.ಗುರುಸಿದ್ದಯ್ಯ, ಬಣಕಾರ ರಾಜಶೇಖರಪ್ಪ, ಕರಿಬಸಪ್ಪ, ಉದಯಶಂಕರ, ಮಧು ಶ್ರೀನಿವಾಸ, ಆನಂದ ಡೊಳ್ಳಿನ, ರಾಜುಗೌಡ್ರ, ನೀಲಗುಂದ ಮಂಜಣ್ಣ ಇದ್ದರು.

ಶುಕ್ರವಾರ ಮಠದ ಶಾಲಾ ವಾರ್ಷಿಕೋತ್ಸವ ಭಾವೈಕ್ಯ ಸಮಾಗಮ ಜರುಗಿತು. ಹೊಸರಿತ್ತಿ ಗುದ್ಲೇಶ್ವರ ಸ್ವಾಮೀಜಿ, ಕುಕನೂರು ಮಹಾದೇವ ಸ್ವಾಮೀಜಿ, ಹಾವನೂರು ದಳವಾಯಿ ಮಠದ ಶಿವಕುಮಾರ ಸ್ವಾಮೀಜಿ, ಕಲ್ಲೇರ ಬಸವರಾಜ್, ಕೆ.ಪರಶುರಾಮಪ್ಪ, ಶಂಕ್ರಯ್ಯ, ಹಾಲಪ್ಪ ಚಿಗಟೇರಿ ಅವರು ಭಾಗವಹಿಸಿದ್ದರು. ಹಾ.ಚಿ.ಬರೆದ ಮನುಕುಲದ ಅರಿವು ಮತ್ತು ದಶದರ್ಶನ ಗ್ರಂಥಗಳು ಬಿಡುಗಡೆ ಮಾಡಿದ ಪ್ರೊ. ಶಂಕರ ಬೆಟಗೇರಿ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.