ವಿಜಯನಗರ (ಹೊಸಪೇಟೆ): ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದ ದೂರಿನ ಹಿನ್ನೆಲೆಯಲ್ಲಿ ಶನಿವಾರ ಬಡಾವಣೆ ಠಾಣೆಯ ಪೊಲೀಸರು ನಗರ ಎಂ.ಜೆ.ನಗರದ ಗೀತಾ (38) ಮತ್ತು ಅವರ ಮಗ ವಿಷ್ಣು (19) ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಎಂ.ಜೆ.ನಗರ 6ನೇ ಕ್ರಾಸ್ ಬಳಿ ಸಾನ್ವಿ ಸ್ಟೀಲ್ಸ್ ಮಳಿಗೆ ಹೊಂದಿದ್ದ ಆಂಧ್ರ ಮೂಲದ ಉದ್ಯಮಿ ವಿ.ಸುಬ್ಬಾರೆಡ್ಡಿ ಅವರನ್ನು ಪರಿಚಯ ಮಾಡಿಕೊಂಡ ಅದೇ ರಸ್ತೆಯ ಗೀತಾ ಮತ್ತು ಅವರ ಮಗ ವಿಷ್ಣು, ಒಂದು ದಿನ ಮನೆಗೆ ಕರೆದು ಪಾನೀಯದಲ್ಲಿ ಮತ್ತು ಬರುವ ಪುಡಿಯನ್ನು ಬೆರಸಿ ಪ್ರಜ್ಞೆ ತಪ್ಪಿಸಿ ಫೋಟೋಗಳನ್ನು ತೆಗೆದಿದ್ದಾರೆ. ನಂತರ ಸುಬ್ಬಾರೆಡ್ಡಿಗೆ ಫೋನ್ ಮಾಡಿ ನಗ್ನ ಫೋಟೋಗಳನ್ನು ಬಯಲು ಮಾಡುವ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ.

ಅಲ್ಲದೆ ಅಕ್ರಮವಾಗಿ ಮನೆಗೆ ನುಗ್ಗಿ ₹ 15ಲಕ್ಷ ನಗದು ಹಾಗೂ ಬಂಗಾರದ ಒಡವೆಗಳನ್ನು ಕದ್ದಿದ್ದಾರೆಂದು ಉದ್ಯಮಿ ಸುಬ್ಬಾರೆಡ್ಡಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧನ ವೇಳೆ ಮನೆಯಲ್ಲಿ 2.75 ಕೆ.ಜಿ ಗಾಂಜಾ ಕೂಡ ಸಿಕ್ಕಿದ್ದು, ಅದನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.