ಹೊಸಪೇಟೆ (ವಿಜಯನಗರ): ಸ್ಟಾಕ್ ಖರೀದಿ ಮಾರಾಟದ ಮೇಲೆ ಹಣ ಹೂಡಿಕೆ ಮಾಡಲು ಮೊಬೈಲ್ ಅಪ್ಲಿಕೇಷನ್ನಲ್ಲಿ ಹಣ ಹಾಕಿದ್ದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ₹54.81 ಲಕ್ಷ ವಂಚಿಸಿದ ಪ್ರಕರಣ ಟಿ.ಬಿ. ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

‘2025ರ ಸೆಪ್ಟೆಂಬರ್ 5ರಿಂದ ನವೆಂಬರ್ 6ರ ನಡುವೆ ಈ ವಂಚನೆ ನಡೆದಿದೆ. ವಂಚಕರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು’ ಎಂದು ಟಿ.ಬಿ.ಡ್ಯಾಂ ಎಚ್ಇಎಸ್ ಕಾಲೊನಿಯ ನಿವಾಸಿ ಜಯಶೀಲನ್ (41) ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ವಿವರ: ಜಯಶೀಲನ್ ಅವರಿಗೆ 2025ರ ಸೆಪ್ಟೆಂಬರ್ 5ರಂದು ಅಸ್ಟಾ ಟ್ರೇಡ್ 238 ಟ್ರೆಂಡ್ ನೇವಿಗೇಷನ್ ಹಬ್ ಎನ್ನುವ ಗ್ರೂಪ್ನಿಂದ ನೇಹಾ ಬನ್ಸಾಲ್ ಎಂಬವರ ವಾಟ್ಸಾಪ್ ನಂಬರ್ನಿಂದ ಸಂದೇಶ ಬಂದಿತ್ತು. ಸೆ.18ರಂದು ಇನ್ನೊಂದು ಗ್ರೂಪ್ಗೆ ಸೇರಿಸಲಾಗಿತ್ತು. ಬಳಿಕ ವರ್ಲ್ಡ್ ಫೈನಾನ್ಸ್ ಚಾಲೆಂಜ್ ಲಿಂಕ್ ಕಳುಹಿಸಲಾಗಿತ್ತು. ಸ್ಟಾಕ್ ಖರೀದಿ ಮಾರಾಟದ ಮೇಲೆ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಬರುತ್ತದೆ ಎಂದು ಹೇಳಿ ಮೊದಲಿಗೆ ₹5 ಸಾವಿರ ಫೋನ್ಪೇ ನಲ್ಲಿ ರೋಹಿತ್ ಎಂಟರ್ಪ್ರೈಸಸ್ ಎಂಬ ಖಾತೆಗೆ ದುಡ್ಡು ಹಾಕಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್ನಷ್ಟು ಹಣ ಹೂಡಿಕೆ ಮಾಡಲು ತನ್ನಲ್ಲಿ ದುಡ್ಡಿಲ್ಲ ಎಂದು ಜಯಶೀಲನ್ ಹೇಳಿದ್ದರು. ಆಗ ವಂಚಕರು ತಮ್ಮ ಮೊಬೈಲ್ ಅಪ್ಲಿಕೇಷನ್ ಮೂಲಕ ಅ.9ರಂದು ₹2.95 ಲಕ್ಷ, ಅ.15ರಂದು ₹11.50 ಲಕ್ಷ, ಅ.22ರಂದು 13.25 ಲಕ್ಷ ಕಳುಹಿಸಿದ್ದಾಗಿ ಹೇಳಿದ್ದರು. ಆದರೆ ಆ ದುಡ್ಡು ಜಯಶೀಲನ್ ಅವರ ಬ್ಯಾಂಕ್ ಖಾತೆಗೆ ಬಂದಿರಲಿಲ್ಲ, ತಮ್ಮ ಮೊಬೈಲ್ ಅಪ್ಲಿಕೇಷನ್ನಲ್ಲಿ ಮಾತ್ರ ಹಣ ಸಂದಾಯವಾಗಿದ್ದನ್ನು ತೋರಿಸಿದ್ದರು. ಈ ಹಣವನ್ನು 7 ದಿನದೊಳಗೆ ಕಟ್ಟಬೇಕು, ತಪ್ಪಿದಲ್ಲಿ ದಿನದ ಲೆಕ್ಕದಲ್ಲಿ ಬಡ್ಡಿ ಬೀಳುತ್ತದೆ ಎಂದು ಬೆದರಿಸಿದ್ದರು. ಅದಕ್ಕೆ ಅಂಜಿ ವಂಚಕರು ಹೇಳಿದ ಖಾತೆಗೆ ಹಣ ಕಳುಹಿಸಲಾಗಿತ್ತು. ಕೊನೆಗೆ ಸಂದೇಹಗೊಂಡ ಜಯಶೀಲನ್ ಅವರು ನ.11ರಂದು ಸೈಬರ್ ಕ್ರೈಂಗೆ ದೂರು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.