ಹೊಸಪೇಟೆ: ಕೆ.ಪಿ.ಸಿ.ಸಿಯ ಅಸಂಘಟಿತ ಕಾರ್ಮಿಕರ ಹಾಗೂ ನೌಕರರ ವಿಭಾಗದ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಪಿ.ವೆಂಕಟೇಶಲು ಅವರನ್ನು ನೇಮಿಸಲಾಯಿತು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಉದಿತ್ ರಾಜ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅನುಮೋದನೆ ಮೇರೆಗೆ ಕೆ.ಪಿ.ಸಿ.ಸಿ. ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್‍ಶೇಖ್ ಅವರ ಶಿಫಾರಸು ಮೇರೆಗೆ ನೇಮಿಸಲಾಗಿದೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಲಿಂಗಣ್ಣನಾಯಕ, ಕಾರ್ಯದರ್ಶಿ ಸಂದೀಪ್, ಸ್ವಾಭಿಮಾನಿ ಆನಂದ್, ಶ್ರೀನಿವಾಸ್ ಉಪಸ್ಥಿತರಿದ್ದರು.