ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಆರು ಗ್ರಾಮಗಳಲ್ಲಿ ಮೊಹರಂ ನಿಷೇಧ

Published 20 ಜುಲೈ 2023, 7:15 IST
Last Updated 20 ಜುಲೈ 2023, 7:15 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ಜಿಲ್ಲೆಯ ವಿವಿಧ ತಾಲ್ಲೂಕಿನ 4 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ 6 ಗ್ರಾಮಗಳಲ್ಲಿ 10 ದಿನಗಳ ಕಾಲ ಆಚರಿಸುವ ಮೊಹರಂ ಹಬ್ಬವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಎಂ.ಎಸ್.ದಿವಾಕರ್ ಆದೇಶಿಸಿದ್ದಾರೆ.

ಈ ಹಿಂದೆ ಗ್ರಾಮದಲ್ಲಿ ನಡೆದಿರುವ ಘಟನೆ ಹಾಗೂ ಸನ್ನಿವೇಶಗಳನ್ನು ಆಧರಿಸಿ ಕೂಡ್ಲಿಗಿ ಪೊಲೀಸ್ ಠಾಣೆಯ ಹನಸಿ, ಮರಿಯಮ್ಮನಹಳ್ಳಿ ಠಾಣೆಯ ತಿಮ್ಮಲಾಪುರ, ಹೊಸಹಳ್ಳಿ ಠಾಣೆಯ ಐಗಳ ಮಲ್ಲಾಪುರ ಮತ್ತು ಟಿ.ಕಲ್ಲಹಳ್ಳಿ ಹಾಗೂ ನಗರ ಗ್ರಾಮೀಣ ಪೊಲೀಸ್ ಠಾಣೆಯ ಹಳೇ ಮಲಪನಗುಡಿ ಮತ್ತು ಕಾರಿಗನೂರು ಗ್ರಾಮಗಳಲ್ಲಿ ಜುಲೈ 20 ರಿಂದ 29ರ ವರೆಗೆ ಮೊಹರಂ ಹಬ್ಬದ ಆಚರಣೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT