ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್ ಅವರ ‘ಜೇಮ್ಸ್‌’ ಚಿತ್ರಕ್ಕೆ ಹೊಸಪೇಟೆ ಉದ್ಯಮಿ ಹೂಡಿಕೆ

Last Updated 29 ಅಕ್ಟೋಬರ್ 2021, 12:08 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಟ ಪುನೀತ್‌ ರಾಜಕುಮಾರ್‌ ನಟನೆಯ ‘ಜೇಮ್ಸ್‌’ ಚಿತ್ರಕ್ಕೆ ಇಲ್ಲಿನ ಸ್ಥಳೀಯ ಉದ್ಯಮಿ ಕಿಶೋರ್‌ ಪತ್ತಿಕೊಂಡ ಹಣ ಹೂಡಿಕೆ ಮಾಡಿದ್ದಾರೆ.

ಭಾರಿ ಬಜೆಟ್‌ನ ಈ ಚಿತ್ರದ ಶೇ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿತ್ತು. ಹಂಪಿ, ಅಂಜನಾದ್ರಿ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ಮುಗಿದಿತ್ತು. ಈ ವರ್ಷವೇ ಚಿತ್ರ ತೆರೆಗೆ ಬರಬೇಕಿತ್ತು. ಆದರೆ, ಕೋವಿಡ್‌ ಲಾಕ್‌ಡೌನ್‌ನಿಂದ ಚಿತ್ರೀಕರಣಕ್ಕೆ ಹಿನ್ನಡೆಯಾಗಿದೆ.

ಮೂಲಗಳ ಪ್ರಕಾರ, ಈಗಾಗಲೇ ಚಿತ್ರೀಕರಣಕ್ಕೆ ₹50 ಕೋಟಿಗೂ ಹೆಚ್ಚು ಖರ್ಚಾಗಿದೆ. ಈಗ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ನಿಧನದಿಂದ ಭಾರಿ ಹಿನ್ನಡೆಯಾಗಿದೆ. ಕಿಶೋರ್‌ ಪತ್ತಿಕೊಂಡ ನಗರದ ಬಾಲ ಚಿತ್ರಮಂದಿರದ ಮಾಲೀಕರೂ ಕೂಡ ಹೌದು. ಪುನೀತ್‌ ಅವರ ಎಲ್ಲ ಚಿತ್ರಗಳು ಅವರ ಚಿತ್ರಮಂದಿರದಲ್ಲಿ ಮಧ್ಯರಾತ್ರಿ ತೆರೆ ಕಾಣುತ್ತಿದ್ದವು.

ಕಿಶೋರ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT